Megamedia News Kannada

ಎಸ್ಸೆಸ್ಸೆಲ್ಸಿ ಫಲಿತಾಂಶ ಉಡುಪಿ ಜಿಲ್ಲೆ ಪ್ರಥಮ, ದ.ಕ ಜಿಲ್ಲೆಯ ವಿದ್ಯಾರ್ಥಿನಿಯರಿಗೆ ಅತಿ ಹೆಚ್ಚು ಅಂಕ
ಬೆಂಗಳೂರು : 2012ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಗುರುವಾರ ಪ್ರಕಟಿಸಿದ್ದು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿ, ಈ ಬಾರಿ ಶೇ.81.16ರಷ್ಟು ಬಾಲಕಿಯರು ಉತ್ತೀರ್ಣರಾಗಿ ಮೇಲುಗೈ ಸಾಧಿಸಿದ್ದು, ಶೇ.71.73ರಷ್ಟು ಬಾಲಕರು ತೇರ್ಗಡೆಯಾಗಿದ್ದಾರೆ. ಇದು ಕಳೆದ ಬಾರಿಗಿಂತ ಶೇ.2.23ರಷ್ಟು ಫಲಿತಾಂಶ ಹೆಚ್ಚಳವಾದಂತಾಗಿದೆ ಎಂದು ವಿವರಿಸಿದರು.

ಪ್ರತಿವರ್ಷದಂತೆ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ 76.13ರಷ್ಟು ಮಂದಿ ತೇರ್ಗಡೆಯಾಗಿದ್ದಾರೆ. ಈ ಬಾರಿ ಉಡುಪಿ ಜಿಲ್ಲೆ ಪ್ರಥಮ ಸ್ಥಾನ, ಶಿರಸಿ ದ್ವಿತೀಯ ಸ್ಥಾನ ಹಾಗೂ ಹಾಸನ ತೃತೀಯ ಸ್ಥಾನ ಪಡೆದಿದ್ದು, ಬೀದರ್ ಕೊನೆಯ ಸ್ಥಾನ ಪಡೆದಿದೆ.

ದ.ಕ ಜಿಲ್ಲೆಯ ಬಂಟ್ವಾಳ ಎಸ್.ವಿ.ಎಸ್ ಆಂಗ್ಲ ಮಾಧ್ಯಮ ಶಾಲೆಯ ನವ್ಯಾ ಆರ್ ಶೆಟ್ಟಿ 625 ಅಂಕಗಳಲ್ಲಿ 623 ಅಂಕ ಗಳಿಸಿ ರಾಜ್ಯದಲ್ಲೆ ಪ್ರಥಮ ಸ್ಥಾನಗಳಿಸಿದ್ದಾರೆ. ಸುರತ್ಕಲ್ ವಿದ್ಯಾದಾಯಿನಿ ಆಂಗ್ಲ ಮಾಧ್ಯಮ ಶಾಲೆಯ ಪಲ್ಲವಿ ಕೆ ರಾವ್ 625ರಲ್ಲಿ 621 ಅಂಕಗಳಿಸುವ ಮೂಲಕ ದ್ವಿತೀಯ ಸ್ಥಾನದಲ್ಲಿದ್ದಾರೆ.

ಈ ಬಾರಿಯೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಆದರೆ ರಾಜ್ಯದ 47 ಶಾಲೆಗಳು ಶೂನ್ಯ ಫಲಿತಾಂಶ ಪಡೆದಿರುವುದಾಗಿ ಹೇಳಿದರು. ಯಾವುದೇ ಕಾರಣಕ್ಕೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಅನುತ್ತೀರ್ಣರಾಗಿದ್ದರೆ ಅಂತಹವರು ಧೈರ್ಯಗುಂದದೆ ಮುಂದಿನ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿಸಬಹುದು. ಹಾಗಂತ ಆತ್ಮಹತ್ಯೆಗೆ ಮುಂದಾಗಬೇಡಿ ಎಂದು ಈ ಸಂದರ್ಭದಲ್ಲಿ ಮನವಿ ಮಾಡಿದರು. ಶುಕ್ರವಾರ ಬೆಳಿಗ್ಗೆ ಎಲ್ಲಾ ಶಾಲೆಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ ಎಂದು ಕಾಗೇರಿ ತಿಳಿಸಿದರು.

ಸಂಭಂದಿತ ಲೇಖನಗಳು

ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಗೆ ಜಯಭೇರಿ

ಪುರಭವನದಲ್ಲಿ ಶಿಕ್ಷಕ ದಿನಾಚರಣೆ ಹಾಗೂ ಸನ್ಮಾನ

ಕೊಪ್ಪಳ ಕರಡಿ ಸಂಗಣ್ಣ ವಿಜಯ

ಉಡುಪಿಯ ನೂತನ ಎಸ್ಪಿಯಾಗಿ ಡಾ|ಎಂ.ಬಿ. ಬೋರಲಿಂಗಯ್ಯ ಅಧಿಕಾರ ಸ್ವೀಕಾರ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆ ಶೇ.68.26 ಮತದಾನ

ಪ್ರತಿ ಮನೆಗೂ ನೀರಿನ ಮೀಟರ್‌ ಕಡ್ಡಾಯಗೊಳಿಸಿ : ಎ.ಜಿ. ಕೊಡ್ಗಿ
ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಮೂರನೇ ಹಣಕಾಸು ಆಯೋಗದ ಶಿಫಾರಸುಗಳ ಅನುಷ್ಠಾನಗಳ ಪರಿಶೀಲನಾ ಸಭೆಯು ಹಣಕಾಸು ಆಯೋಗದ ಶಿಫಾರಸುಗಳ ಅನುಷ್ಠಾನ ಆಯೋಗದ ಅಧ್ಯಕ್ಷ ಎ.ಜಿ. ಕೊಡ್ಗಿಯವರ ಅಧ್ಯಕ್ಷತೆಯಲ್ಲಿ ಪಾಲಿಕೆಯ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.

ಕುಡಿಯಲು ಉಪಯೋಗಿಸಬೇಕಾದ ನೀರನ್ನು ಶ್ರೀಮಂತರು ಕೃಷಿ ಮತ್ತಿತರ ಉದ್ದೇಶಗಳಿಗೂ ಬಳಸುತ್ತಿರುವುದು ಕಂಡುಬರುತ್ತಿದೆ. ನೀರಿನ ದುರುಪಯೋಗ ತಡೆದು ಎಲ್ಲರಿಗೂ ಮೀಟರ್‌ ಕಡ್ಡಾಯಗೊಳಿಸಲು ಪಾಲಿಕೆ ಕಠಿನ ಕ್ರಮ ಕೈಗೊಳ್ಳಬೇಕು. ಪಾಲಿಕೆಯ ವ್ಯಾಪ್ತಿಯಲ್ಲಿ ಹಲವೆಡೆ ಬಡವರ ಹೆಸರಿನಲ್ಲಿ ಕುಡಿಯುವ ನೀರಿನ ಅಪವ್ಯಯವಾಗುತ್ತಿದೆ ಎಂದು ಎ.ಜಿ. ಕೊಡ್ಗಿ ಸೂಚನೆ ನೀಡಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಕೊರತೆ ಸರಿದೂಗಿಸಲು ವಿತರಣೆ ವ್ಯವಸ್ಥೆಯಲ್ಲಿ ಆಗಿರುವ ಲೋಪವನ್ನು ಸರಿದೂಗಿಸಬೇಕು ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ವ್ಯಾಪ್ತಿಯಲ್ಲಿ ಇರುವ ಅನಧಿಕೃತ ಕಟ್ಟಡಗಳನ್ನು ಮುಂದಿನ ಒಂದು ತಿಂಗಳ ಒಳಗೆ ಪತ್ತೆಹಚ್ಚಿ ತೆರಿಗೆ ವ್ಯಾಪ್ತಿಗೆ ತರುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಸೂಚಿನೆ ನೀಡಿದರು. ಅನಧಿಕೃತ ಕಟ್ಟಡಗಳ ಕುರಿತು ಅಧಿಕಾರಿಗಳು ಸರಿಯಾಗಿ ನೀಡಿದ ಮಾಹಿತಿ ಸಂಗ್ರಹಿಸುವಲ್ಲಿ ವಿಫಲರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ 6 ತಿಂಗಳಾಗಿದ್ದು, ಇಲ್ಲಿವರೆಗೆ ಉತ್ತರ ಬಂದಿಲ್ಲ ಎಂದು ಪಾಲಿಕೆ ಆಯುಕ್ತ ಡಾ| ಹರೀಶ್‌ ಕುಮಾರ್‌ ತಿಳಿಸಿದರು.

ಆಯೋಗದ ಸದಸ್ಯ ಕಾರ್ಯದರ್ಶಿ ರಾಮಚಂದ್ರ, ಸದಸ್ಯರಾದ ಮಹೇಂದ್ರ ಕಂಠಿ, ತಿಮ್ಮೇಗೌಡ, ಮೇಯರ್‌ ಗುಲ್ಜಾರ್‌ಭಾನು, ಉಪ ಮೇಯರ್‌ ಅಮಿತಕಲಾ, ಜಿಲ್ಲಾಧಿಕಾರಿ ಡಾ| ಎನ್‌. ಎಸ್‌. ಚನ್ನಪ್ಪ ಗೌಡ ಅವರು ಉಪಸ್ಥಿತರಿದ್ದರು.

ಸಂಭಂದಿತ ಲೇಖನಗಳು

ಕುಡಿಯುವ ನೀರಿಗಾಗಿ ದ.ಕ. ಜಿಲ್ಲಾಧಿಕಾರಿಗಳನ್ನು ಬೇಟಿ ಮಾಡಿದ ಕಾರ್ಪೊರೇಟರ್‌ಗಳು

ದಕ್ಷಿಣ ಕನ್ನಡ ದಿಢೀರ್‌ ಮಳೆಯಿಂದ ಜನಜೀವನ ಅಸ್ತವ್ಯಸ್ತ, ವಿದ್ಯುತ್ ಸ್ಥಗಿತ

ರಾಷ್ಟ್ರ ಮಟ್ಟದ ಯುವಜನೋತ್ಸವಕ್ಕೆ 12 ಕೋಟಿ ವೆಚ್ಚದ ಸಿದ್ಧತೆ : ಡಿವಿಎಸ್

ಮಂಗಳೂರು ಮಹಾನಗರ ಪಾಲಿಕೆ ಕಚೇರಿಗೆ ಬಾಂಬ್‌ ಬೆದರಿಕೆ

ಸಶಕ್ತ ಕಾರ್ಯನಿರ್ವಹಣೆಗೆ  ಸಂಪನ್ಮೂಲ ಕ್ರೋಢೀಕರಣ ಅಗತ್ಯ: ಎ ಜೆ ಕೂಡ್ಗಿ

ಶಿಘ್ರದಲ್ಲೇ ಡಿ.ವಿ.ಸದಾನಂದ ಗೌಡರ ಸಂಪುಟ ವಿಸ್ತರಣೆ
ಬೆಂಗಳೂರು : ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಇನ್ನು ಒಂದು ವಾರದಲ್ಲೇ ಸಂಪುಟ ವಿಸ್ತರಣೆ ಮಾಡುವುದಾಗಿ ಸೋಮವಾರ ಮತ್ತೊಮ್ಮೆ ಹೇಳಿದ್ದಾರೆ. ಸುಮಾರು 21 ಖಾತೆಗಳ ಹೊರೆಯನ್ನು ಹೊಂದಿರುವ ಅವರು ಖಾತೆ ಹಂಚಿಕೆಯ ಮೂಲಕ ತಮ್ಮ ಮೇಲಿರುವ ಜವಾಬ್ದಾರಿಯನ್ನು ಕಡಿಮೆ ಮಾಡಲು ಮುಂದಾಗಿದ್ದಾರೆ.

ಸಂಪುಟ ಪುನಾರಚನೆ, ಖಾತೆ ಹಂಚಿಕೆ ಸಂಬಂಧ ಪಕ್ಷದ ಹೈಕಮಾಂಡ್ ಜೊತೆ ಚರ್ಚಿಸಿ ವಿಸ್ತರಿಸುವುದಾಗಿ ಸಿಎಂ ವಿಶ್ವಾಸದಿಂದ ಹೇಳಿದ್ದಾರೆ.

ಸುಮಾರು 21 ಖಾತೆಗಳ ಭಾರ ಹೊರುವುದು ಸುಲಭವಲ್ಲ. ಎಲ್ಲ ಖಾತೆಗಳಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಂಪುಟ ವಿಸ್ತರಣೆ ಅನಿವಾರ್ಯ ಎಂದರು.

ಸಂಪುಟ ವಿಸ್ತರಣೆಯಲ್ಲಿ ಯಾವುದೇ ರಾಜಕೀಯ ಇಲ್ಲ, ಪ್ರಕರಣ, ಕೋರ್ಟ್ ತೀರ್ಪು ಅವುಗಳನ್ನೆಲ್ಲ ತಳಕು ಹಾಕಬೇಡಿ ಎಂದ ಮುಖ್ಯಮಂತ್ರಿಗಳು, ನಮ್ಮದೂ ಕೂಡ ರಾಷ್ಟ್ರೀಯ ಪಕ್ಷ ಪಕ್ಷದ ಹೈಕಮಾಂಡ್ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲು ಸಮಯ ಬೇಕಾಗುತ್ತದೆ ಎಂದು ಹೇಳಿದರು.

ಆದರೆ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರು ವಿದೇಶಕ್ಕೆ ತೆರಳಿರುವುದರಿಂದ ಸಂಪುಟ ವಿಸ್ತರಣೆ ಸಾಧ್ಯತೆ ಕಡಿಮೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸಂಭಂದಿತ ಲೇಖನಗಳು

ಸಚಿವ ಸಂಪುಟ ಪುನರಾಚನೆಯ ಅಂತಿಮ ಪಟ್ಟಿ ಸಿದ್ದ, ಸಿಎಂ ದೆಹಲಿಗೆ

ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ರಾಜೀನಾಮೆ

ನೂತನ ಮುಖ್ಯ ಮಂತ್ರಿಯವರಿಂದ ತವರು ಜಿಲ್ಲೆಗೆ ಮೊದಲ ಭೇಟಿ

26ನೇ ಮುಖ್ಯಮಂತ್ರಿಯಾಗಿ ಡಿ.ವಿ ಸದಾನಂದ ಗೌಡ ಪ್ರಮಾಣವಚನ

ಕ್ರೈಸ್ತರ ಮೇಲಿನ 23 ಪ್ರಕರಣಗಳನ್ನು ಕೈಬಿಡಲು ರಾಜ್ಯ ಸಚಿವ ಸಂಪುಟ ನಿರ್ಧಾರ

ಕೊಲ್ಲೂರಿನಲ್ಲಿ ಚಂಡಿಕಾ ಹೋಮ, ಸುಹಾಸಿನಿ ಪೂಜೆ ಸಲ್ಲಿಸಿದ : ವಿಜಯ ಮಲ್ಯ
ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭಾನುವಾರ ಆಗಮಿಸಿದ ವಿಜಯ ಮಲ್ಯ ಅವರು ಚಂಡಿಕಾ ಹೋಮ, ಸುಹಾಸಿನಿ ಪೂಜೆ ಹಾಗೂ ಮಹಾ ಪೂಜೆಯಲ್ಲಿ ಪಾಲ್ಗೊಂಡರು. ಅನಂತರ ವೀರಭದ್ರ ದೇವರ ದರ್ಶನ ಪಡೆದು ದೇವಳದ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿದರು.

ದೇವಳದ ಸಮಗ್ರ ಅಭಿವೃದ್ಧಿಗೆ ಕಾಣಿಕೆ ರೂಪದಲ್ಲಿ ನೆರವು ನೀಡಲು ಸದಾಸಿದ್ಧನಿದ್ದೇನೆ. ಶ್ರೀ ದೇವಿಯ ಅನುಗ್ರಹದಿಂದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಈ ಹಿಂದೆ ಧ್ವಜಸ್ತಂಭ ನಿರ್ಮಾಣಕ್ಕೆ ಕಾಣಿಕೆ ರೂಪವಾಗಿ ನೆರವು ನೀಡಿರುವುದನ್ನು ಸ್ಮರಿಸಿದರಲ್ಲದೆ ಶ್ರೀ ದೇವಿಯ ಭಕ್ತನಾಗಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಲು ಸಂತೋಷವಾಗುತ್ತದೆ ಎಂದರು.

ಮಾಜಿ ಆಡಳಿತ ಧರ್ಮದರ್ಶಿ ಕೃಷ್ಣಪ್ರಸಾದ ಅಡ್ಯಂತಾಯ ಅವರ ಸಮಕ್ಷಮದಲ್ಲಿ ಮಾತನಾಡಿದ ಮಲ್ಯರು ದೇವಾಲಯದ ಮಿಕ್ಕುಳಿದ ಅಭಿವೃದ್ಧಿ ಕಾರ್ಯಕ್ಕೆ ತಗಲುವ ವೆಚ್ಚದ ಸಂಪೂರ್ಣ ಮಾಹಿತಿ ಕೂಡಲೇ ರವಾನಿಸುವಂತೆ ಹೇಳಿದರು.

ದೇವಳದ ಅರ್ಚಕರಾದ ಪರಮೇಶ್ವರ ಅಡಿಗ, ಶ್ರೀಧರ ಅಡಿಗ, ನರಸಿಂಹ ಅಡಿಗ, ನಿಕಟಪೂರ್ವ ಆಡಳಿತ ಧರ್ಮದರ್ಶಿ ಕೃಷ್ಣಪ್ರಸಾದ ಅಡ್ಯಂತಾಯ, ಕಾರ್ಯನಿರ್ವಾಹಣಾಧಿಕಾರಿ ಸಂಜೀವ ಮಡಿವಾಳ, ಅಧೀಕ್ಷಕ ರಾಮಕೃಷ್ಣ ಅಡಿಗ ಮೊದಲಾದವರು ಉಪಸ್ಥಿತರಿದ್ದರು.

ಸಂಭಂದಿತ ಲೇಖನಗಳು

ಕೃಷಿ ತೋಟದಲ್ಲಿ ಪರ್ಯಾಯ ಬೆಳೆಗೆ ಪ್ರೊತ್ಸಾಹ ಧನ : ಡಿ.ವಿ. ಸದಾನಂದ ಗೌಡ

ಮೆಸ್ಕಾಂನ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಶ್ರೀ ವಿಜಯನರಸಿಂಹ

ಪತಿಯನ್ನು ಕಳೆದುಕೊಂಡ ಮಹಿಳೆಯರಿಂದ ಹೋಮದ ಪೂರ್ಣಾಹುತಿ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತಿಸಂಭ್ರಮದ ಚಂಪಾಷಷ್ಠಿ ಬ್ರಹ್ಮರಥೋತ್ಸವ ಸಮಾಪನ

ಭರತಾಂಜಲಿಯಿಂದ ಅಕ್ಟೋಬರ್ 23ಕ್ಕೆ ಪುರಭವನದಲ್ಲಿ `ಪಾದ ಪಂಚದಶಕಮ್’

ದ.ಕನ್ನಡ ಸಾಹಿತ್ಯ ಪರಿಷತ್‌ ಗೆ ಜಿಲ್ಲಾಧ್ಯಕ್ಷರಾಗಿ ಪ್ರದೀಪ್‌ ಕುಮಾರ್‌ ಕಲ್ಕೂರ ಪುನರಾಯ್ಕೆ
ಮಂಗಳೂರು: ದ.ಕನ್ನಡ ಸಾಹಿತ್ಯ ಪರಿಷತ್‌ ಗೆ ಭಾನುವಾರ ನಡೆದ ಚುನಾವಣೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ ಅವರು 106 ಮತಗಳಿಂದ ಜಯಸಾಧಿಸಿ, ಸತತ ನಾಲ್ಕನೇ ಬಾರಿಗೆ ಜಿಲ್ಲಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.

ಕಲ್ಕೂರ ಅವರು 464 ಮತಗಳು ಗಳಿಸಿದರೆ ಅವರ ಸಮೀಪದ ಪ್ರತಿಸ್ಪರ್ಧಿ, ಮಂಗಳೂರು ತಾಲೂಕು ಕಸಪಾ ನಿಕಟಪೂರ್ವ ಅಧ್ಯಕ್ಷ ಸರ್ವೋತ್ತಮ ಅಂಚನ್‌ ಅವರು 358 ಮತಗಳನ್ನು ಪಡೆದುಕೊಂಡಿದ್ದಾರೆ. ಇನ್ನೋರ್ವ ಅಭ್ಯರ್ಥಿ ಹರೀಶ್‌ ಬಂಟ್ವಾಳ್‌ ಅವರು 149 ಮತಗಳನ್ನು ಗಳಿಸಿದ್ದಾರೆ.

ದ.ಕ. ಜಿಲ್ಲೆಯಲ್ಲಿ ಒಟ್ಟು 1932 ಮತದಾರರ ಪೈಕಿ 974 ಮಂದಿ ಮತ ಚಲಾಯಿಸಿದ್ದರು. 971 ಮತಗಳು ಕ್ರಮಬದ್ಧವಾಗಿದ್ದು 3 ಮತಗಳು ಅಸಿಂಧುಗೊಂಡಿದವು.

ಪ್ರದೀಪ್‌ ಕುಮಾರ್‌ ಕಲ್ಕೂರ ಅವರು ಬಂಟ್ವಾಳ, ಪುತ್ತೂರು, ಬೆಳ್ತಂಗಡಿ ತಾಲೂಕುಗಳಲ್ಲಿ ಮುನ್ನಡೆ ಸಾಧಿಸಿದರೆ ಸರ್ವೋತ್ತಮ ಅಂಚನ್‌ ಅವರು ಮಂಗಳೂರು ತಾಲೂಕಿನಲ್ಲಿ ಮುನ್ನಡೆ ಸಾಧಿಸಿದ್ದರು. ಹರೀಶ್‌ ಬಂಟ್ವಾಳ್‌ ಅವರು ಸುಳ್ಯ ಭಾರೀ ಮುನ್ನಡೆ ದಾಖಲಿಸಿದ್ದರು.

ಮಂಗಳೂರು ತಾಲೂಕಿನಲ್ಲಿ ಪ್ರದೀಪ್‌ ಕುಮಾರ್‌ ಕಲ್ಕೂರ – 192, ಸರ್ವೋತ್ತಮ ಅಂಚನ್‌- 272, ಹರೀಶ್‌ ಬಂಟ್ವಾಳ್‌ – 6 ಮತಗಳನ್ನು ಗಳಿಸಿದ್ದಾರೆ. 2 ಮತಗಳು ತಿರಸ್ಕೃತಗೊಂಡಿವೆ, ಬಂಟ್ವಾಳ: ಕಲ್ಕೂರ- 94, ಅಂಚನ್‌-27, ಹರೀಶ್‌- 13, ಪುತ್ತೂರು: ಕಲ್ಕೂರ- 68, ಅಂಚನ್‌- 34, ಹರೀಶ್‌-5, ಸುಳ್ಯ: ಕಲ್ಕೂರ- 12, ಅಂಚನ್‌- 8, ಹರೀಶ್‌- ११८, ಬೆಳ್ತಂಗಡಿ: ಕಲ್ಕೂರ- 98, ಅಂಚನ್‌- 17, ಹರೀಶ್‌- 7 . 1 ಮತ ತಿರಸ್ಕೃತಗೊಂಡಿದೆ.

ಸಂಭಂದಿತ ಲೇಖನಗಳು

ಮುಖ್ಯಮಂತ್ರಿಗಳಿಂದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ

ಹಿರಿಯ ಸಾಹಿತಿ ಡಾ| ಕೋಟ ಶಿವರಾಮ ಕಾರಂತರ 109ನೇ ಹುಟ್ಟು ಹಬ್ಬ. ಅ 10ಕ್ಕೆ.

ಮಂಗಳೂರು ಮಹಾನಗರ ಪಾಲಿಕೆ ಸಭೆಯಲ್ಲಿ ಮೊಬೈಲ್‌ ನಿಷೇಧಿಸಿದ ಮೇಯರ್‌

ನೆಹರೂ ಮೈದಾನದಲ್ಲಿ 63ನೇ ಗಣರಾಜ್ಯೋತ್ಸವ ರಾಷ್ಟ್ರ ಧ್ವಜಾರೋಹಣ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆ ಕೆ.ಜಯಪ್ರಕಾಶ್ ಹೆಗ್ಡೆ ಭಾರಿ ಅಂತರದ ಗೆಲುವು

ಬಿಬಿಎಂಪಿ ಮೇಯರ್ ಡಿ. ವೆಂಕಟೇಶಮೂರ್ತಿ ಹಾಗೂ ಉಪ ಮೇಯರ್ ಎಲ್. ಶ್ರೀನಿವಾಸ್ ಆಯ್ಕೆ
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 46ನೇ ಮೇಯರ್ ಆಗಿ ಬಿಜೆಪಿಯ ಡಿ. ವೆಂಕಟೇಶಮೂರ್ತಿ ಹಾಗೂ 47ನೇ ಉಪ ಮೇಯರ್ ಆಗಿ ಎಲ್. ಶ್ರೀನಿವಾಸ್ ಗುರುವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಾಲಿಕೆಯ ಕೆಂಪೇಗೌಡ ಪೌರ ಸಭಾಂಗಣದಲ್ಲಿ ಮಧ್ಯಾಹ್ನ 2 ಗಂಟೆಗೆ ಔಪಚಾರಿಕವಾಗಿ ನಡೆದ ಚುನಾವಣೆಯಲ್ಲಿ ಮೇಯರ್, ಉಪ ಮೇಯರ್ ಆಯ್ಕೆಯನ್ನು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಪ್ರಾದೇಶಿಕ ಆಯುಕ್ತ ಶಂಭು ದಯಾಳ್ ಮೀನಾ ಪ್ರಕಟಿಸಿದರು.

ಮೇಯರ್ ಸ್ಥಾನಕ್ಕೆ ಪೈಪೋಟಿ ಇದ್ದರೂ ಡಿ. ವೆಂಕಟೇಶಮೂರ್ತಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಉಪ ಮೇಯರ್ ಸ್ಥಾನಕ್ಕೆ ಪದ್ಮನಾಭನಗರ ವಾರ್ಡ್‌ನ ಎಲ್. ಶ್ರೀನಿವಾಸ್ ಕೂಡ ಅವಿರೋಧವಾಗಿ ಆಯ್ಕೆಯಾದರು. ಉಪ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಹೆಗ್ಗನಹಳ್ಳಿ ವಾರ್ಡ್‌ನ ಪಕ್ಷೇತರ ಸದಸ್ಯ ಎಂ.ಬಿ. ಗೋವಿಂದೇಗೌಡ ಕೊನೇ ಗಳಿಗೆಯಲ್ಲಿ ತಮ್ಮ ನಾಮಪತ್ರ ಹಿಂತೆಗೆದುಕೊಂಡಿದ್ದರು.

ನಿಕಟಪೂರ್ವ ಮೇಯರ್ ಪಿ. ಶಾರದಮ್ಮ ಅವರಿಂದ ಡಿ. ವೆಂಕಟೇಶಮೂರ್ತಿ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ನಗರ ಬಿಜೆಪಿ ಶಾಸಕರು ಹಾಗೂ ಪಾಲಿಕೆಯ ಸದಸ್ಯರು ಪಕ್ಷ-ಭೇದ ಮರೆತು ಹೂಗುಚ್ಛ ನೀಡಿ ಶುಭ ಹಾರೈಸಿದರು. ಉಪ ಮೇಯರ್ ಎಲ್. ಶ್ರೀನಿವಾಸ್‌ಗೆ ಅಧಿಕಾರ ಹಸ್ತಾಂತರಿಸಬೇಕಾಗಿದ್ದ ನಿಕಟಪೂರ್ವ ಉಪ ಮೇಯರ್ ಎಸ್. ಹರೀಶ್ ಗೈರು ಹಾಜರಿ ಎದ್ದು ಕಂಡಿತು.

ಬೆಳಿಗ್ಗೆ ನಗರದ ಖಾಸಗಿ ಹೋಟೆಲೊಂದರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್. ಅಶೋಕ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಡಿ. ವೆಂಕಟೇಶಮೂರ್ತಿ ಹೆಸರನ್ನು ಮೇಯರ್ ಸ್ಥಾನಕ್ಕೆ ಅಂತಿಮಗೊಳಿಸಲಾಯಿತು.

ಕುರುಬ ಸಮುದಾಯಕ್ಕೆ ಸೇರಿದ ಡಿ. ವೆಂಕಟೇಶಮೂರ್ತಿ ಹಾಗೂ ಬಿ. ಸೋಮಶೇಖರ್ ನಡುವೆ ಮೇಯರ್ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಅಂತಿಮವಾಗಿ ಸೋಮಶೇಖರ್ ಮನವೊಲಿಸುವ ಮೂಲಕ ಕಣದಿಂದ ಹಿಂದೆ ಸರಿಯುವಂತೆ ಸೂಚಿಸಲಾಯಿತು. ಇದರಿಂದ ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳೆರಡಕ್ಕೂ ಅವಿರೋಧ ಆಯ್ಕೆ ನಡೆಯಲು ಹಾದಿ ಸುಗಮವಾಯಿತು.

ಡಿ. ವೆಂಕಟೇಶಮೂರ್ತಿ ಅವರು 1958ರ ಅಕ್ಟೋಬರ್ 8ರಂದು ನಗರದ ಎ.ವಿ. ದೇವಪ್ಪ ಮತ್ತು ವೆಂಕಟಮ್ಮ ದಂಪತಿಯ ಜೇಷ್ಠ ಪುತ್ರನಾಗಿ ನಗರದ ಎನ್.ಆರ್. ಕಾಲೋನಿಯಲ್ಲಿ ಜನನ. ಪತ್ನಿ: ಕೆ. ಪ್ರಭಾ. ಇಬ್ಬರು ಮಕ್ಕಳು: ( ವಿ.ಅಶ್ವಿನಿ, ವಿ. ಕಾರ್ತಿಕ್),

ಎಸ್ಸೆಸ್ಸೆಲ್ಸಿವರೆಗೆ ಗ್ರಾಮೀಣ ಭಾಗದಲ್ಲಿ ಶಿಕ್ಷಣ. ದಯಾನಂದ ಸಾಗರ್ ಮಹಾವಿದ್ಯಾಲಯದಲ್ಲಿ ವಾಣಿಜ್ಯ ವಿಭಾಗದಲ್ಲಿ ಪದವಿ. 1987ರಲ್ಲಿ ಕೆಎಸ್‌ಆರ್‌ಟಿಸಿಯಲ್ಲಿ ದ್ವಿತೀಯ ದರ್ಜೆ ಗುಮಾಸ್ತನಾಗಿ ಸರ್ಕಾರಿ ಸೇವೆಗೆ ಸೇರ್ಪಡೆ.

1989ರಲ್ಲಿ ಸರ್ಕಾರಿ ಹುದ್ದೆಗೆ ರಾಜೀನಾಮೆ, ಸಮಾಜ ಸೇವೆ ಆರಂಭ. 1996ರಲ್ಲಿ ಪದ್ಮನಾಭನಗರ, 2001ರಲ್ಲಿ ಶ್ರೀನಿವಾಸನಗರ, 2010ರಲ್ಲಿ ಕತ್ರಿಗುಪ್ಪೆ ವಾರ್ಡ್‌ನಿಂದ ಬಿಜೆಪಿಯಿಂದ ಪಾಲಿಕೆ ಸದಸ್ಯರಾಗಿ ಆಯ್ಕೆ. 1997-98ರಿಂದ ಪಾಲಿಕೆಯ ವಿವಿಧ ಸ್ಥಾಯಿ ಸಮಿತಿಗಳ ಸದಸ್ಯನಾಗಿ ಸೇವೆ, 2003-04ರಲ್ಲಿ ಪಾಲಿಕೆ ವಿರೋಧ ಪಕ್ಷದ ನಾಯಕನಾಗಿ ಸೇವೆ. ಬಿಬಿಎಂಪಿಯ ಮೇಲ್ಮನವಿ (ಅಪೀಲು) ಸ್ಥಾಯಿ ಸಮಿತಿಯ ಪ್ರಥಮ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದಾರೆ..

ಎಲ್. ಶ್ರೀನಿವಾಸ್ ಅವರು ಎಲ್ ಲಕ್ಷ್ಮಯ್ಯ- ಚೌಡಮ್ಮ ದಂಪತಿ ಮಗನಾಗಿ 1962ರ ಜೂನ್ 1ರಂದು ಜನನ. ಪತ್ನಿ ಯಶೋಧಾ ಹಾಗೂ ಇಬ್ಬರು ಮಕ್ಕಳಿದ್ದಾರೆ. (ಪುತ್ರ ಮತ್ತು ಪುತ್ರಿ). 2001ರಲ್ಲಿ ಪದ್ಮನಾಭನಗರ ವಾರ್ಡ್‌ನಿಂದ ಪ್ರಥಮ ಬಾರಿಗೆ ಪಾಲಿಕೆ ಸದಸ್ಯನಾಗಿ ಆಯ್ಕೆ. ಬಿಜೆಪಿ ಯುವ ಮೋರ್ಚಾ ನಗರ ಜಿಲ್ಲಾ ಘಟಕದ ಅಧ್ಯಕ್ಷನಾಗಿಯೂ ಕಾರ್ಯನಿರ್ವಹಣೆ. 2010ರ ಪಾಲಿಕೆ ಚುನಾವಣೆಯಲ್ಲಿ ಇದೇ ವಾರ್ಡ್‌ನಿಂದ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ.

ಸಂಭಂದಿತ ಲೇಖನಗಳು

ಮಂಗಳೂರು ಪಾಲಿಕೆ : ವಿರೋಧ ಪಕ್ಷಕ್ಕೆ ಮೇಯರ್, ಆಡಳಿತ ಪಕ್ಷಕ್ಕೆ ಉಪಮೇಯರ್

ಕೆನಡಾದ ಡೆಲ್ಟಾ ಮಹಾ ನಗರ ಪಾಲಿಕೆಯ ತಂಡ ಮಂಗಳೂರಿನಲ್ಲಿ

ನೂತನ ಮೇಯರ್‌ ಆಗಿ ಪ್ರವೀಣ್‌ ಹಾಗೂ ಉಪಮೇಯರ್‌ ಆಗಿ ಶ್ರೀಮತಿ ಎನ್. ಗೀತಾ. ಎನ್‌. ನಾಯಕ್‌

ಮಂಗಳೂರು ಮಹಾನಗರ ಪಾಲಿಕೆ ಸಭೆಯಲ್ಲಿ ಮೊಬೈಲ್‌ ನಿಷೇಧಿಸಿದ ಮೇಯರ್‌

ಮಂಗಳೂರು ಮಹಾನಗರಪಾಲಿಕೆಗೆ ವಾಮಾಚಾರ ಮಂತ್ರಿಸಿದ ತಗಡು, ನಿಂಬೆಹಣ್ಣು, ಕುಂಬಳಕಾಯಿ ಪತ್ತೆ

ನೇತ್ರಾವತಿ ಸೇತುವೆ ಹಳಿ ದ್ವಿಗುಣ ರೈಲು ಸಂಚಾರ ಸಮಯ ಬದಲಾವಣೆ
ಮಂಗಳೂರು : ರೈಲು ಹಳಿ ದ್ವಿಗುಣ ಕಾಮಗಾರಿ ಪ್ರಗತಿಯಲ್ಲಿರುವ ಕಾರಣ ನೇತ್ರಾವತಿ ಸೇತುವೆ ಮತ್ತು ಮಂಗಳೂರು ಜಂಕ್ಷನ್‌ (ಕಂಕನಾಡಿ) ನಡುವಿನ ರೈಲು ಸಂಚಾರ ವ್ಯವಸ್ಥೆಯನ್ನು ಕೆಲವು ನಿರ್ದಿಷ್ಟ ದಿನಗಳಿಗೆ ವ್ಯತ್ಯಯ ಮಾಡಲಾಗಿದೆ ಎಂದು ರೈಲ್ವೇ ಇಲಾಖೆಯ ಪ್ರಕಟನೆ ತಿಳಿಸಿದೆ.

ಕೆಲವು ರೈಲುಗಳ ಪ್ರಯಾಣ ರದ್ದು, ಇನ್ನು ಕೆಲವು ರೈಲುಗಳ ಸಮಯ ಬದಲಾವಣೆ ಹಾಗೂ ಇನ್ನು ಕೆಲವು ರೈಲುಗಳ ಪ್ರಯಾಣವನ್ನು ನಿರ್ಬಂಧಿಸಲಾಗಿದೆ.

ಮಂಗಳೂರು ಸೆಂಟ್ರಲ್‌- ಕಬಕ ಪುತ್ತೂರು ಪ್ಯಾಸೆಂಜರ್‌ (ಟ್ರೈನ್‌ ನಂ. 56645) ಮತ್ತು ಸುಬ್ರಹ್ಮಣ್ಯ ರೋಡ್‌- ಮಂಗಳೂರು ಸೆಂಟ್ರಲ್‌ ಪ್ಯಾಸೆಂಜರ್‌ (ಟ್ರೈನ್‌ ನಂ. 56646) ರೈಲುಗಳು ಎ. 28, 29, 30, ಮೇ 2, 3 ಮತ್ತು 4ರಂದು ಮಂಗಳೂರು ಸೆಂಟ್ರಲ್‌ ಮತ್ತು ಮಂಗಳೂರು ಜಂಕ್ಷನ್‌ ನಡುವೆ ಸಂಚರಿಸುವುದಿಲ್ಲ.

ನಿಜಾಮುದ್ದೀನ್‌ – ತಿರುವನಂತಪುರ ರಾಜಧಾನಿ ಎಕ್ಸ್‌ಪ್ರೆಸ್‌ (ಟ್ರೈನ್‌ ನಂ. 12432) ರೈಲು ಪ್ರಯಾಣವನ್ನು ಎ. 30ರಂದು ಮಂಗಳೂರು ಜಂಕ್ಷನ್‌ ನಿಲ್ದಾಣದಲ್ಲಿ ಸುಮಾರು 45 ನಿಮಿಷ ತಡೆಹಿಡಿಯಲಾಗುವುದು.

ಮಂಗಳೂರು ಸೆಂಟ್ರಲ್‌- ಕಣ್ಣೂರು ಪ್ಯಾಸೆಂಜರ್‌ (56656) ರೈಲು ಮೇ 8, 9 ಮತ್ತು 10ರಂದು ಮಂಗಳೂರು ಸೆಂಟ್ರಲ್‌ ಮತ್ತು ಉಳ್ಳಾಲ ನಡುವೆ ಪ್ರಯಾಣಿಸುವುದಿಲ್ಲ. ಈ ರೈಲು ನಿಗದಿತ ಸಮಯಕ್ಕೆ ಉಳ್ಳಾಲ ನಿಲ್ದಾಣದಿಂದ ಹೊರಡುವುದು.

ಮೇ 8: ಮಂಗಳೂರು ಸೆಂಟ್ರಲ್‌- ಚೆನ್ನೈ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ (ಟ್ರೈನ್‌ ನಂ. 12686) ಮೇ 8ರಂದು ಸಂಜೆ 4.10 ಗಂಟೆಯ ಬದಲು 110 ನಿಮಿಷ ತಡವಾಗಿ 6 ಗಂಟೆಗೆ ಹೊರಡುವುದು. ಮಂಗಳೂರು ಸೆಂಟ್ರಲ್‌- ತಿರುವನಂತಪುರ ಎಕ್ಸ್‌ಪ್ರೆಸ್‌ (ಟ್ರೈನ್‌ ನಂ. 16348) ಅಂದು ಮಧ್ಯಾಹ್ನ 2.30ರ ಬದಲಾಗಿ 225 ನಿಮಿಷ ತಡವಾಗಿ ಸಂಜೆ 6.15ಕ್ಕೆ ಹೊರಡುವುದು.

ಮಂಗಳೂರು ಸೆಂಟ್ರಲ್‌-ತಿರುವನಂತಪುರ ಮಾವೇಲಿ ಎಕ್ಸ್‌ಪ್ರೆಸ್‌ (ಟ್ರೈನ್‌ ನಂ. 16303) ಅಂದು ಸಂಜೆ 5.45ರ ಬದಲಾಗಿ 45 ನಿಮಿಷ ತಡವಾಗಿ 6.30ಕ್ಕೆ ಹೊರಡುವುದು. ಮಂಗಳೂರು ಸೆಂಟ್ರಲ್‌ – ತಿರುವನಂತಪುರ ಮಲಬಾರ್‌ ಎಕ್ಸ್‌ಪ್ರೆಸ್‌ (ಟ್ರೈನ್‌ ನಂ. 16330) ಅಂದು ಸಂಜೆ 6.25ರ ಬದಲು 50 ನಿಮಿಷ ತಡವಾಗಿ 7.15ಕ್ಕೆ ಹೊರಡುವುದು. ನಾಗರಕೋವಿಲ್‌ – ಮಂಗಳೂರು ಸೆಂಟ್ರಲ್‌ ಎರ್ನಾಡ್‌ ಎಕ್ಸ್‌ಪ್ರೆಸ್‌ (ಟ್ರೈನ್‌ ನಂ. 16606) ಸಂಜೆ 4.45ರಿಂದ 6.35ರ ತನಕ (110 ನಿಮಿಷ) ತಡೆಹಿಡಿಯಲಾಗುವುದು

ಮೇ 9: ಮಂಗಳೂರು ಸೆಂಟ್ರಲ್‌ – ಚೆನ್ನೈ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ (ಟ್ರೈನ್‌ ನಂ. 12686) ಮೇ 9ರಂದು ಸಂಜೆ 4.10ರ ಬದಲಾಗಿ 50 ನಿಮಿಷ ವಿಳಂಬವಾಗಿ 5 ಗಂಟೆಗೆ ಹೊರಡಲಿದೆ. ಮಂಗಳೂರು ಸೆಂಟ್ರಲ್‌ – ತಿರುವನಂತಪುರ ಎಕ್ಸ್‌ಪ್ರೆಸ್‌ (ಟ್ರೈನ್‌ ನಂ. 16348) ಅಂದು ಮಧ್ಯಾಹ್ನ 2.30ರ ಬದಲಾಗಿ 165 ನಿಮಿಷ ತಡವಾಗಿ ಸಂಜೆ 5.15ಕ್ಕೆ ಹೊರಡಲಿದೆ. ನಾಗರಕೋವಿಲ್‌- ಮಂಗಳೂರು ಸೆಂಟ್ರಲ್‌ ಎರ್ನಾಡು ಎಕ್ಸ್‌ಪ್ರೆಸ್‌ (ಟ್ರೈನ್‌ ನಂ. 16606) ಸಂಜೆ 4.45ರ ಬದಲಾಗಿ 50 ಗಂಟೆ ವಿಳಂಬವಾಗಿ 5.20ಕ್ಕೆ ಪ್ರಯಾಣ ಆರಂಭಿಸಲಿದೆ.

ಮೇ 10: ಮಂಗಳೂರು ಸೆಂಟ್ರಲ್‌ – ಚೆನ್ನೈ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ (ಟ್ರೈನ್‌ ನಂ. 12686) ಮೇ 10ರಂದು ಸಂಜೆ 4.10ರ ಬದಲಾಗಿ 50 ನಿಮಿಷ ತಡವಾಗಿ 5 ಗಂಟೆಗೆ ಹೊರಡಲಿದೆ. ಮಂಗಳೂರು ಸೆಂಟ್ರಲ್‌ – ತಿರುವನಂತಪುರ ಎಕ್ಸ್‌ಪ್ರೆಸ್‌ (ಟ್ರೈನ್‌ ನಂ. 16348) ಅಂದು ಮಧ್ಯಾಹ್ನ 2.30ರ ಬದಲು 165 ನಿಮಿಷ ತಡವಾಗಿ ಸಂಜೆ 5.15ಕ್ಕೆ ಹೊರಡಲಿದೆ.

ನಾಗರಕೋವಿಲ್‌ – ಮಂಗಳೂರು ಸೆಂಟ್ರಲ್‌ ಎರ್ನಾಡು ಎಕ್ಸ್‌ಪ್ರೆಸ್‌ (ಟ್ರೈನ್‌ ನಂ. 16606) ಉಳ್ಳಾಲ ನಿಲ್ದಾಣದಲ್ಲಿ 35 ನಿಮಿಷಗಳ ಕಾಲ ತಡೆಹಿಡಿಯಲ್ಪಟ್ಟು ಸಂಜೆ 4.45ಕ್ಕೆ ಬದಲಾಗಿ 5. 20ಕ್ಕೆ ಹೊರಡಲಿದೆ.

ಸಂಭಂದಿತ ಲೇಖನಗಳು

ವಿವೇಕಾನಂದರ ಸಂದೇಶ ಹೊತ್ತು ತಂದಿರುವ ‘ವಿವೇಕ ಎಕ್ಸ್‌ಪ್ರೆಸ್‌’ ಮಂಗಳೂರಿನಲ್ಲಿ

ಮಂಗಳೂರಿನಲ್ಲಿ ಆಟೋ ರಿಕ್ಷಾ ಪ್ರೀಪೇಯ್ಡ ಸೇವಾ ಕೌಂಟರ್‌ ಪುನರಾರಂಭ

ಸ್ಪೈಸ್‌ಜೆಟ್‌ ಮಂಗಳೂರು-ಹೈದರಾಬಾದ್‌ ಪ್ರಯಾಣ ದರ ರೂ. 1,499

ಮಂಗಳೂರು ದಕ್ಷಿಣ ಉಪ ವಿಭಾಗ ಪೊಲೀಸ್‌ ಕಮಿಷನರೇಟ್ ಕಚೇರಿ ಉದ್ಘಾಟನೆ

ನೋ ಪಾರ್ಕಿಂಗ್‌ : ಪಾಲಿಕೆಯ ಆರೋಗ್ಯ ಅಧಿಕಾರಿಗೆ ದಂಡ

ಶೈಲು, ತೂಫನ್, ಗೊಕುಲ, ನರಸಿಂಹ ಚಿತ್ರದ ಸ್ಟಿಲ್ಸ್
View Photo Album

ಸಂಭಂದಿತ ಲೇಖನಗಳು

ನಮ್ಮವರು  ಸಂಘಟನೆಯಿಂದ ಹಳೆಮೈಸೂರು ಸಂಪ್ರದಾಯದ “ಮೈಸೂರು ದಸರಾ ಬೊಂಬೆ ಪ್ರದರ್ಶನ”

ಬೆಂಗಳೂರಿನಲ್ಲಿ ಪ್ರದರ್ಶನಕ್ಕೆ ಕಾಲಿಟ್ಟ ‘ಒರಿಯರ್ದೊರಿ ಅಸಲ್‌’

ತುಳು ಚಿತ್ರ ನಿರ್ಮಾಪಕ ವಿಜಯುಕಮಾರ್‌ ಕೊಡಿಯಾಲ್‌ಬೈಲ್‌ ಜೊತೆ ಪತ್ರಿಕಾ ಸಂವಾದ

ಉಪೇಂದ್ರ ಹೊಸ ಚಿತ್ರ ‘ಶ್ರೀಮತಿ’

ಕಾಲ್ಗೆಜ್ಜೆ ಚಿತ್ರ ವಿಮರ್ಶೆ

ಕುಡಿಯುವ ನೀರಿಗಾಗಿ ದ.ಕ. ಜಿಲ್ಲಾಧಿಕಾರಿಗಳನ್ನು ಬೇಟಿ ಮಾಡಿದ ಕಾರ್ಪೊರೇಟರ್‌ಗಳು
ಮಂಗಳೂರು : ನಗರದ ಜನರ ಕುಡಿಯುವ ನೀರಿನ ಬವಣೆಯನ್ನು ನೀಗಿಸಲು ಕ್ರಮ ಕೈಗೊಳ್ಳಬೇಕು ಎಂದು ಮಂಗಳೂರು ಮಹಾ ನಗರ ಪಾಲಿಕೆಯ ಕಾರ್ಪೊರೇಟರ್‌ಗಳ ನಿಯೋಗ ದ.ಕ. ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದೆ. ತುಂಬೆ ವೆಂಟೆಡ್‌ ಡ್ಯಾಮ್‌ನಿಂದ ಮೇಲ್ಗಡೆ ನೇತ್ರಾವತಿ ಮತ್ತು ಕುಮಾರಧಾರಾ ನದಿಗಳಿಗೆ ಕಟ್ಟಿರುವ ಎಲ್ಲ ಅಣೆಕಟ್ಟುಗಳನ್ನು ಡಿಸೆಂಬರ್‌ ಬಳಿಕ ಮಳೆ ಬರುವ ತನಕ ಜಿಲ್ಲಾಧಿಕಾರಿಯವರು ಸ್ವಾಧೀನಕ್ಕೆ ತಗೆದುಕೊಂಡು ನೀರು ಹಂಚಿಕೆಯ ಬಗ್ಗೆ ಮಹಾನಗರ ಪಾಲಿಕೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಆಗ್ರಹಿಸಿತು.

ಮಾಜಿ ಮೇಯರ್‌ಗಳಾದ ಎಂ. ಶಶಿಧರ ಹೆಗ್ಡೆ ಮತ್ತು ಕೆ. ಅಶ್ರಫ್‌ ನೇತೃತ್ವದ ನಿಯೋಗ ಶುಕ್ರವಾರ ಜಿಲ್ಲಾಧಿಕಾರಿ ಡಾ| ಎನ್‌. ಎಸ್‌. ಚನ್ನಪ್ಪ ಗೌಡ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.

ಮಂಗಳೂರು ಮಹಾ ನಗರ ಪಾಲಿಕೆಗೆ ದಿನಕ್ಕೆ 38 ಎಂ.ಜಿ.ಡಿ. ನೀರಿನ ಆವಶ್ಯಕತೆ ಇದೆ. ಈ ವರ್ಷ ಅಕ್ಟೋಬರ್‌ ಬಳಿಕ ಮಳೆ ಬಾರದಿರುವ ಕಾರಣ ಮತ್ತು ಎಂಆರ್‌ಪಿಎಲ್‌, ಎ.ಎಂ.ಆರ್‌, ಮತ್ತಿತರ ಕೈಗಾರಿಕೆಗಳು ಅವುಗಳ ಅಣೆಕಟ್ಟಿನಲ್ಲಿ ನೀರನ್ನು ಶೇಖರಣೆ ಮಾಡಿದ ಕಾರಣ ಪಾಲಿಕೆಗೆ ನೀರಿನ ಸಮಸ್ಯೆ ಎದುರಾಗಿದೆ. ಡಿಸೆಂಬರ್‌ ಬಳಿಕ ಕಾರ್ಖಾನೆಗಳು ವಿದ್ಯುತ್‌ ಉತ್ಪಾದನೆ ಮಾಡುವುದನ್ನು ನಿಲ್ಲಿಸಲು ಆದೇಶಿಸ ಬೇಕು ಮತ್ತು ಎಂಆರ್‌ಪಿಎಲ್‌ನ ಸಿಬಂದಿಗೆ ಕುಡಿಯಲು ಮತ್ತು ಸುರಕ್ಷತೆಗೆ ಬೇಕಾದಷ್ಟು ನೀರನ್ನು ಮಾತ್ರ ಪೂರೈಸ ಬೇಕು, ಎಂಎಸ್‌ಇಝಡ್‌ನ‌ ಉದ್ದೇಶಿತ ಅಣೆಕಟ್ಟು ನಿರ್ಮಾಣ ಯೋಜನೆಯ ಕೆಲಸವನ್ನು ಸ್ಥಗಿತಗೊಳಿಸ ಬೇಕು ಎಂದು ಮನವಿಯಲ್ಲಿ ವಿವರಿಸಲಾಗಿದೆ.

ನಿಯೋಗದಲ್ಲಿ ಕಾರ್ಪೊರೇಟರ್‌ಗಳಾದ ನವೀನ್‌ ಆರ್‌. ಡಿ’ಸೋಜಾ, ಡಿ.ಕೆ. ಅಶೋಕ್‌ ಕುಮಾರ್‌, ಮರಿಯಮ್ಮ ತೋಮಸ್‌, ಜಸಿಂತಾ ವಿಜಯಾ ಆಲ್ಪೆರ್ಡ್, ವಿಜಯ ಲಕ್ಷ್ಮೀ, ಭಾರತಿ ದಿನೇಶ್‌, ಮಮತಾ ಶೆಣೈ, ಜೆಸಿಂತಾ ಬೊರೇಮಿಯೊ, ಜಿಲ್ಲಾ ಕಾಂಗ್ರೆಸ್‌ನ ಪದಾಧಿಕಾರಿಗಳಾದ ಟಿ.ಕೆ. ಸುಧೀರ್‌, ಸುಧಾಕರ ಶೆಣೈ, ಲತೀಫ್‌ ಕಂದಕ್‌, ಶ್ರೀನಿವಾಸ್‌ ಶಿಬರೂರು ಮುಂತಾದವರಿದ್ದರು.

ಸಂಭಂದಿತ ಲೇಖನಗಳು

ಅಡುಗೆ ಅನಿಲ ಸಮಸ್ಯೆ ದ.ಕ ಜಿಲ್ಲಾ ಕಾಂಗ್ರೆಸ್‌ ಕಾರ್ಯಕರ್ತರಿಂದ ಪ್ರತಿಭಟನೆ

ಪ್ರತಿ ಮನೆಗೂ ನೀರಿನ ಮೀಟರ್‌ ಕಡ್ಡಾಯಗೊಳಿಸಿ : ಎ.ಜಿ. ಕೊಡ್ಗಿ

ವಿದ್ಯುತ್‌ ಕ್ಷಾಮಕ್ಕೆ ಬಿಜೆಪಿ ಸರಕಾರದ ಆಡಳಿತ ವೈಫಲ್ಯವೇ ಮುಖ್ಯ ಕಾರಣಃ ಜೈನ್‌

ಪಾಶ್ಚಿಮಾಭಿಮುಖವಾಗಿ ಹರಿಯುವ ನದಿಗಳಿಗೆ ಕಿಂಡಿ ಅಣೆಕಟ್ಟು ಮತ್ತು ಉಪ್ಪು ನೀರು ತಡೆ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಬೇಕು : ಭಟ್

ಕಾನೂನು ಸಚಿವ ಎಂ.ವೀರಪ್ಪ ಮೊಲಿಯವರಿಂದ ನೂತನ ಆರೋಗ್ಯ ಕೇಂದ್ರದ ಕಟ್ಟಡಕ್ಕೆ ಶಿಲಾನ್ಯಾಸ

ದಕ್ಷಿಣ ಕನ್ನಡ ದಿಢೀರ್‌ ಮಳೆಯಿಂದ ಜನಜೀವನ ಅಸ್ತವ್ಯಸ್ತ, ವಿದ್ಯುತ್ ಸ್ಥಗಿತ
ಮಂಗಳೂರು: ಬುಧವಾರ ಸಂಜೆಯ ವೇಳೆಗೆ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಡೆ ಉತ್ತಮಳೆಯಾಗಿದ್ದು, ಕಳೆದ ಹಲವು ದಿನಗಳಿಂದ ಬಿಸಿಲ ಬೇಗೆಯಿಂದ ಕಂಗಾಲಾಗಿದ್ದ ಜನತೆಯು ಮಳೆಯ ತಂಪಿನಿಂದ ನಿಟ್ಟುಸಿರುವ ಬಿಡುವಂತಾಯಿತು. ಆದರೆ ಮಳೆಯ ಪೂರ್ವಸಿದ್ಧತೆಯಿಲ್ಲದೆ ಪೇಟೆಗೆ, ಕಚೇರಿಗಳಿಗೆ ತೆರಳಿದ್ದ ಜನರು ಸಂಜೆ ವೇಳೆಗೆ ಸುರಿದ ದಿಢೀರ್‌ ಮಳೆಯಿಂದ ಸ್ವಲ್ಪ ಮಟ್ಟಿನ ಸಮಸ್ಯೆ ಎದುರಿಸಿದರು.

ಮಂಗಳವಾರ ತಡರಾತ್ರಿ ಗುಡುಗು ಸಹಿತ ಸಾಮಾನ್ಯ ಮಳೆಯಾದರೆ, ಬುಧವಾರ ಸಂಜೆಯ ವೇಳೆಗೆ ಉತ್ತಮ ಮಳೆಯಾಗಿದೆ, ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಒಟ್ಟು 20 ಕ್ಕೂ ಅಧಿಕ ವಿದ್ಯುತ್‌ ತಂತಿ ಕಂಬಗಳು ನೆಲಕ್ಕುರುಳಿದ ಪರಿಣಾಮ ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಿದೆ. ಬಂಟ್ವಾಳದ ಚೆಂಬೂರು ಬಳಿ ಮರವೊಂದು ಮನೆಯ ಮೇಲೆ ಉರುಳಿದ್ದು, ನಷ್ಟ ಸಂಭವಿಸಿದೆ. ಸುಬ್ರಹ್ಮಣ್ಯದಲ್ಲಿ ಆಲಿಕಲ್ಲು ಮಳೆಯಾಗಿದೆ.

ವಿದ್ಯುತ್‌ ಕಂಬಗಳು ನೆಲಕ್ಕುರುಳಿದ ಪ್ರದೇಶದಲ್ಲಿ ವಿದ್ಯುತ್‌ ಸಂಪರ್ಕ ಅವಸ್ತವ್ಯಸ್ತವಾಗಿದ್ದು, ಮೆಸ್ಕಾಂ ಸಿಬಂದಿಗಳು ಸಮರೋಪಾದಿಯಲ್ಲಿ ಕೆಲಸ ನಡೆಸುತ್ತಿದ್ದಾರೆ. ಗುರುವಾಯನಕೆರೆಯಲ್ಲಿ ವಿದ್ಯುತ್‌ ಕಂಬ ನೆಲಕ್ಕುರುಳಿದ ಪ್ರದೇಶದಲ್ಲಿ ಸುಮಾರು 250 ಕ್ಕೂ ಅಧಿಕ ವಾಹನಗಳು ಒಂದೆಡೆ ಬಾಕಿಯಾಗಿ ವಾಹನ ದಟ್ಟನೆ ಉಂಟಾಯಿತು.

ಸುಬ್ರಹ್ಮಣ್ಯದಲ್ಲಿ ಸಂಜೆ 4 ಗಂಟೆಯಿಂದಲೇ ಮಳೆಯಾಗಿದ್ದು, ರಸ್ತೆಯಲ್ಲಿ ಹರಿದ ಮಳೆನೀರಿನಿಂದ ಸಂಚಾರ ವ್ಯವಸ್ಥೆಯಲ್ಲೂ ಕೆಲವೆಡೆ ಸಮಸ್ಯೆಯಾಯಿತು. ಮಳೆಗಾಳಿಯ ಸಂದರ್ಭದಲ್ಲಿ ವಿದ್ಯುತ್‌ ಸಂಪರ್ಕದಲ್ಲೂ ವ್ಯತ್ಯಯವಾಯಿತು.

ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆಯಾದ ಕಾರಣ ತುಂಬೆ ನೀರಿನ ಮಟ್ಟವೂ ಏರಿಕೆಯಾಗುವುದರಿಂದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ತೀವ್ರ ಕೊರತೆ ಕಾಣಿಸಿಕೊಳ್ಳುವ ಭೀತಿಯಿಂದ ಇಲ್ಲಿನ ನಾಗರಿಕರು ಪಾರಾಗುವ ಸೂಚನೆ ಕಂಡುಬಂದಿದೆ.

ಸಂಭಂದಿತ ಲೇಖನಗಳು

ವರ್ಣವಯ ಶೋಭಾಯಾತ್ರೆ ಯೊಂದಿಗೆ ‘ಮಂಗಳೂರು ದಸರಾ’ ಸಮಾಪನ

ಭಾರತದ ಆರ್ಥಿಕ ನೀತಿಗೆ ನೆಹರೂ ಕೊಡುಗೆ ಅಪಾರ : ಪ್ರೊ| ವಿ.ಕೆ. ನಟರಾಜ್‌

ಸುವರ್ಣ ಗ್ರಾಮೋದಯದಲ್ಲಿ ಸಂಪರ್ಕ ವಲಯಕ್ಕೆ ರಾಜ್ಯ ಸರಕಾರದ ಆದ್ಯತೆ :ಪಾಲೆಮಾರ್‌

ಚರ್ಚ್ ದಾಳಿ ಕೇಸುಗಳನ್ನು ಹಿಂದಕ್ಕೆ ಪಡೆಯಲು ಮಂಗಳೂರು ಬಿಷಪ್ ಮನವಿ

ಪ್ರತಿ ಮನೆಗೂ ನೀರಿನ ಮೀಟರ್‌ ಕಡ್ಡಾಯಗೊಳಿಸಿ : ಎ.ಜಿ. ಕೊಡ್ಗಿ