ಕದಿರೆಯ ಮಂಜುನಾಥ

10:03 PM, Wednesday, January 19th, 2011
Share
1 Star2 Stars3 Stars4 Stars5 Stars
(No Ratings Yet)
Loading ... Loading ...

ಕದ್ರಿ ದೇವಸ್ಥಾನ ಮಂಗಳೂರು : ‘ಓಂ ನಮೋ ಭಗವತೇ ಮಂಜುನಾಥಾಯ’ ಎಂಬ ಏಕಾದಶಾಕ್ಷರೀ ಮಂತ್ರವು ಪರಮ ಪಾವನವಾದುದು. ಈ ಮಂತ್ರದ ಬಲದಿಂದ ಸಿದ್ಧರೂ, ಯೋಗಿಗಳೂ ಮಂತ್ರ ಸಿದ್ಧಿಯಿಂದ ವಾಕ್ ಸಿದ್ಧಿಯಿಂದ ಪಡೆದಿದ್ದಾರೆ. ಅವತಾರ ಪುರುಷನಾದ ಪರಶುರಾಮನು ಈ ಮಂತ್ರ ಸಿದ್ಧಿಯಿಂದ ಪರಶಿವನ್ನೊಲಿಸಿಕೊಂಡಿದ್ದನು. ಭಕ್ತರ ಇಷ್ಟಾರ್ಥವನ್ನು ಪೂರೈಸಲು ಅವರವರ ಭಾವಕ್ಕೆ ತಕ್ಕಂತೆ ಒಲಿದುಕೊಳ್ಳುವ ದೇವದೇವನು ಪರಶುರಾಮನಿಗೆ ಮಂಜುನಾಥನಾಗಿ ಒಲಿದುಕೊಂಡಿದ್ದನು. ಭಗವಾನ್ ಮಂಜುನಾಥನು ಕದಲೀ ವನ ಮಧ್ಯದಲ್ಲಿರುವ ರಸಕೂಪದಲ್ಲಿ ಜ್ಯೋತಿರ್ಲಿಂಗ ಸ್ವರೂಪನಾಗಿ ಅವತರಿಸಿದ ಲೀಲೆಯೇ ಈ ಕದಲೀ ಕ್ಷೇತ್ರ ಮಹಾತ್ಮೈಯಾಗಿದೆ.
ಕದ್ರಿ ದೇವಸ್ಥಾನ ಈ ಕದಲೀ ಕ್ಷೇತ್ರವು ಸಿದ್ಧಾಶ್ರಮದ ಒಂದು ಭಾಗವಾಗಿತ್ತು. ಮಹಾತಪಸ್ವಿಗಳೂ, ಸಿದ್ಧಯೋಗಿಗಳೂ ನೆಲಸುವ ಈ ಭೂಮಿಯಲ್ಲಿ ಪಾಪ ಭೀತಿಗಳಿಲ್ಲ. ಈ ಪವಿತ್ರವಾದ ಆಶ್ರಮಪದದಲ್ಲಿ ಮಹಾ ಯೋಗಿಗಳಾದ ಕಪಿಲ ಮುನಿಗಳು ಆಶ್ರಮವನ್ನು ಕಟ್ಟಿಕೊಂಡು ಶಿಷ್ಯ ಸಮುದಾಯವನ್ನು ಜ್ಞಾನ ಸಂಪನ್ನರನ್ನಾಗಿ ಮಾಡುತಿದ್ದರು. ಆಶ್ರಮ ಪದದ (ಗುರುಕುಲ) ಸಿದ್ಧಯೋಗಿಗಳಲ್ಲಿ ವಾಕ್ಯಾರ್ಥಗಳು ನಡೆಯುತ್ತಿದ್ದವು. ಭೃಗು ಮುನಿಗಳೇ ಮೊದಲಾದವರು ನಡೆಸುತ್ತಿದ್ದ ವಾಕ್ಯಾರ್ಥಗಳಲ್ಲಿ ಮಂಜುನಾಥನ ಮಹಾಯೋಗದ ವಿಚಾರಗಳು ಬರುತ್ತಿದ್ದವು. ಕಪಿಲ ಮುನಿಗಳಂತಹ ಬ್ರಹ್ಮ ಋಷಿಗಳ ಜೊತೆಯಲ್ಲಿ ದೇವತೆಗಳೂ ಬಂದು ನೆಲಸಲು ಬಯಸುತ್ತಿದ್ದರು. ಇದರಿಂದಾಗಿ ಕಾಲಕಾಲಕ್ಕೆ ಮಳೆ ಬೆಳೆಗಳಾಗಿ ನಾಡು ಸಮೃದ್ಧಿಯಾಗಿತ್ತು. ಕಪಿಲ ಮುನಿಗಳೂ, ಭೃಗುಮುನಿಗಳೂ ನಡೆಸಿದ ಸಂವಾದದಲ್ಲಿ ತಿಳಿದು ಬಂದ ಮಂಜುನಾಥ ಮಹಾತ್ಮೈಯನ್ನು ಈ ಸಿದ್ಧಾಶ್ರಮದಲ್ಲಿ ನೆಲಸಿದ್ದ ಭಾರದ್ವಾಜ ಮುನಿಗಳು ತಮ್ಮ ಶಿಷ್ಯರಲ್ಲೊಬನಾದ ಸುಮಂತುವಿಗೆ ಹೇಳಿರುವುದರಿಂದ ಇದಕ್ಕೆ ಭಾರದ್ವಾಜ ಸಂಹಿತೆ ಎಂಬುದಾಗಿ ಅನ್ವರ್ಥನಾಮವೂ ಬಂದಿದೆ.
ಕದ್ರಿ ದೇವಸ್ಥಾನ ಧರ್ಮ ಸಂಸ್ಥಾಪನೆಗೋಸ್ಕರ ಪರಮಾತ್ಮನು ಯುಗಯುಗಗಳಲ್ಲಿ ಅವತರಿಸುತ್ತಿರುತ್ತಾನೆ. ಹಿಂದೆ ಅತೀ ಭಯಂಕರನಾದ ಒಬ್ಬ ದಾನವನು ವೇದಗಳನ್ನು ಕದ್ದೊಯ್ದನು. ಆತನ ಸಂಹಾರಕ್ಕಾಗಿ ಹಾಗೂ ವೇದ ಸಂರಕ್ಷಣೆಗಾಗಿ ಭಗವಂತನು ಮತ್ಸ್ಯಾವತಾರವನ್ನೆತ್ತಿದನು. ದೇವ ಸಂಪತ್ತೆಲ್ಲವೂ ಸಮುದ್ರ ಪಾಲಾಗಿದ್ದಾಗ ಸಮುದ್ರ ಮಥನ ಕಾರ್ಯವಾಗಬೇಕಾಯಿತು. ಆಗ ದೇವತೆಗಳೂ, ರಾಕ್ಷಸರೂ ಸೇರಿ ವಾಸುಕಿಯನ್ನೇ ಹಗ್ಗವನ್ನಾಗಿ ಮಾಡಿ, ಮಂದರ ಪರ್ವತವನ್ನೆ ಕಡೆಗೋಲನ್ನಾಗಿ ಮಾಡಿಕೊಂಡು ಸಮುದ್ರವನ್ನು ಮಥನ ಮಾಡಲು ತೊಡಗಿದರು. ಆದರೆ ಮಂದರ ಪರ್ವತವು ಸಮುದ್ರದಲ್ಲಿ ಮುಳುಗುತ್ತಿತ್ತು. ಆಗ ಮಹಾವಿಷ್ಣುವು ಕುರ್ಮಾವತಾರವನ್ನು ತಾಳಿ ತನ್ನ ಬೆನ್ನಿನಿಂದ ಈ ಪರ್ವತವನ್ನು ವಹಿಸಿದನು. ಲೋಕ ಕಂಟಕನಾಗಿ ಭೂಮಿಯನ್ನೇ ನಡುಗಿಸುತ್ತಿದ್ದ ಹಿರಣ್ಯಾಕ್ಷನನ್ನು ಅಡಗಿಸಿ, ಭೂಮಿಯನ್ನುದ್ದರಿಸಲು ವರಾಹವತಾರವನ್ನೆತ್ತಿದ್ದನು. ಭಕ್ತನಾದ ಪ್ರಹ್ಲಾದನನ್ನು ಕಾಪಾಡುಲು ಕಂಬದಲ್ಲಿ ನರಸಿಂಹ ರೂಪವನ್ನು ತಾಳಿ ಹಿರಣ್ಯ ಕಶಿಪುವನ್ನು ನಿಗ್ರಹಿಸಿದನು. ದೇವ ದ್ವೇಷಿಯಾದ ಬಲಿಯನ್ನು ದಮನ ಮಾಡಲು ವಾಮನಾವತಾರದಲ್ಲಿ ಬಂದನು. ಅದೇ ಪರಮಾತ್ಮನು ದುಷ್ಟ ಕ್ಷತ್ರಿಯರ ಗರ್ವವನ್ನಡಗಿಸಲು ಪರಶುರಾಮಾವತಾರವನ್ನೆತ್ತಿದನು. ಮುಂದೆ ಆದರ್ಶ ಪ್ರಜಾವತ್ಸಲನೂ, ಪಿತೃವಾಕ್ಯ ಪರಿಪಾಲಕನೂ ಆಗಿ ಶ್ರೀ ರಾಮನ ಲೀಲೆಯನ್ನು ಮೆರೆದನು. ಪ್ರೇಮ ರಹಸ್ಯವನ್ನು ಜಗತ್ತಿಗೆ ಸಾರಲು ಕೃಷ್ಣಾವತಾರವನ್ನೆತ್ತಿ ದುಷ್ಟರ ನಿಗ್ರಹ, ಶಿಷ್ಟರ ಪರಿಪಾಲನೆಯ ಕಾರ್ಯವನ್ನು ಮಾಡಿದನು. ಮಾನವ ಧರ್ಮವನ್ನು ಪಾವನಗೊಳಿಸಲು ಮಹಾಜ್ಞಾನವೇ ಸಾಧನವೆಂಬುದನ್ನು ಸಾರಲು ಬೌದ್ಧಾವತಾರವನ್ನೆತ್ತಿದನು. ಕಲ್ಕಿ ಅವತಾರವನ್ನೆತ್ತಿ ಮ್ಲೇಂಛರ (ದುರ್ಗಣ-ಸ್ವಾಭಾವದವರೆಂಬ ಕಲ್ಪನೆ) ನಿರ್ಮೂಲನಕ್ಕೆ ಬಯಸಿರುವನೆಂದೂ ಧರ್ಮ ಸಂಸ್ಥಾಪನೆಗಾಗಿ ಅವತಾರವೆತ್ತುವ ಮಾಹಮಹಿಮನಾದ ದೇವದೇವನ ದಶಾವತಾರಗಳನ್ನು ಕೊಂಡಾಡುತ್ತಾರೆ.
ಈ ದಶಾವತಾರಗಳಲ್ಲಿ ಪರಶುರಾಮಾವತಾರವು ಕದಲೀವನ ಕ್ಷೇತ್ರ ಮಹಾತ್ಮೈಗೆ ಸಂಬಂಧಿಸಿದೆ. ಭಗವಂತನು ತನ್ನ ಅವತಾರದಲ್ಲಿ ದೇವನಾಗಿಯೂ, ಭಕ್ತನಾಗಿಯೂ ಲೋಕಕ್ಕೆ ಲೀಲೆಯನ್ನು ತೋರುತ್ತಾನೆ.
ಕದ್ರಿ ದೇವಸ್ಥಾನ ಕದಲೀ ವನದಲ್ಲಿ ಮಂಜುನಾಥ ಸ್ವಾಮಿ:
ಪರಶುರಾಮನು ದುಷ್ಟ ಕ್ಷತ್ರಿಯರನ್ನೆಲ್ಲ ಸಂಹರಿಸಿ ಸಹ್ಯಾದ್ರಿಯಲ್ಲಿ ಬಂದು ನೆಲಸಿದನು. ತಾನು ಕ್ಷತ್ರಿಯರನ್ನು ಸೋಲಿಸಿ ಗಳಿಸಿದ ರಾಜ್ಯವನ್ನೆಲ್ಲ ಗುರುದಕ್ಷಿಣೆಯ ರೂಪದಲ್ಲಿ ಕಶ್ಯಪನಿಗೆ ದಾನವಿತ್ತನು. ತಾನದರಲ್ಲಿದ್ದು ಉಪಭೋಗಿಸುವುದು ಧರ್ಮವಲ್ಲವೆಂದು ಬಗೆದು ಪರಶಿವನನ್ನು ಕುರಿತು ತಪಸ್ಸು ಮಾಡಿದನು. ಪರಮೇಶ್ವರನು ಲೋಕಾನುಗ್ರಹಕ್ಕಾಗಿ ಮಂಜುನಾಥನಾಗಿ ಅವತರಿಸುವೆನೆಂದನು. ಆಗ ಪರಶುರಾಮನು ತನಗಾಗಿ ಪ್ರತ್ಯೇಕ ಒಂದು ತಪೋ ಭೂಮಿಯನ್ನು ಕರುಣಿಸಬೇಕೆಂದೂ ಈ ಪಾಪಾರ್ಜಿತ ಭೂಮಿಯಲ್ಲಿ ತಪಸ್ಸು ಮಾಡಲು ಇಚ್ಛಿಸುವುದಿಲ್ಲವೆಂದೂ ಬೇಡಿಕೊಂಡನು. ದೇವದೇವನು ತಾನು ಅವತರಿಸುವ ಕದಲೀ ಕ್ಷೇತ್ರದಲ್ಲೇ ತಪಸ್ಸು ಮಾಡುತ್ತಿರುವಂತೆ ಹೇಳಿದನು.  ಪರಶಿವನ ಆಜ್ಞೆಯಂತೆ ಸಹ್ಯಾದ್ರಯಿಂದ ಹತ್ತು ಯೋಜನ ದೂರದಲ್ಲಿರುವ ಕದಳೀವನದ ಕಡೆಗೆ ನೋಡಿದನು. ಸಮುದ್ರ ಅವತರಿಸಿಕೊಂಡಿದ್ದ ಆ ಭಾಗವನ್ನು ಶಿವನ ಅಪ್ಪಣೆಯಂತೆ ಬಿಟ್ಟು ಕೊಡಲು ಸಮುದ್ರವನ್ನು ಕೇಳಿಕೊಂಡನು. ಸಮಾಧಾನದಿಂದ ಕೇಳಿದಾಗ ಒಲಿಯದ ಸಮುದ್ರದ ಮೇಲೆ ತನ್ನ ಕೊಡಲಿಯ ಪ್ರಭಾವವನ್ನು ಬೀರಿದನು. ಸಮುದ್ರದ ನೀರು ಹಿಂದೆ ಸರಿದು ಭೂಭಾಗವು ಗೋಚರವಾಯಿತು.
ಶಿವನ ಅಪ್ಪಣೆಯಂತೆ ಪರಶುರಾಮನು ಈ ಭೂ ಪ್ರದೇಶಕ್ಕೆ ಬಂದು ನೋಡಿದನು. ಅಲ್ಲಿ ಒಂದು ಕದಳೀವನವೂ ಅದರ ಮಧ್ಯದಲ್ಲಿ ಒಂದು ರಸಕೂಪವೂ ಗೋಚರಿಸಿತು. ಪರಶುರಾಮನು ಪರಶಿವನ ಮಂಜುನಾಥವತಾರದ ಕುರಿತಾಗಿ ತಪಸ್ಸು ಮಾಡಿ ಒಲಿಸಿಕೊಂಡನು. ಅಷ್ಟಲೋಹವನ್ನು ಕಾಂಚದವನ್ನಾಗಿ ಮಾಡುವ ಲೋಹ ಸಿದ್ಧಿಯೂ, ದರ್ಶನ ಮಾತ್ರದಿಂದ ಅಜರಾಮರವಾದ ದೇಹಸಿದ್ಧಿಯೂ ರಸಕೂಪದ ವೈಶಿಷ್ಟ್ಯ. ಅಂತಹ ರಸಕೂಪದಲ್ಲಿ ಪರಶಿವನು ಪರಶುರಾಮನಿಗೆ ಕಾಣಿಸಿಕೊಂಡನು.
ಸಹ್ಯಾದ್ರಿಯ ದಕ್ಷಿಣ ಭಾಗ (ಬಲಭಾಗ) ಸಮುದ್ರ ತೀರ ಸುಂದರವಾದ ಆ ಭೂಖಂಡವನ್ನು ನೋಡಿಯೇ ಪರಶುರಾಮನು ಆನಂದ ಪರವಶನಾದನು. ಅಂತಹ ಪ್ರದೇಶದಲ್ಲಿ ಕದಳೀ ವನವು ಶೋಭಿಸುತ್ತಿದ್ದು ಅದರ ಮಧ್ಯದಲ್ಲಿರುವ ರಸಕೂಪವು ಅದರಲ್ಲಿರುವ ಮಂಜುನಾಥ ಸ್ವರೂಪನಾದ ಪರಶಿವನ ಲಿಂಗವೂ ಪರಶುರಾಮನ ಭಕ್ತಿಗೆ ದೊರೆತ ಸಿದ್ಧಿ ಕ್ಷೇತ್ರವಾಯಿತು. ಬಾಲೇಂದು ಶೇಖರನು ಅನುಗ್ರಹಿಸಿದ ಈ ಭೂಭಾಗದಲ್ಲಿ ಸಿದ್ಧಯೋಗಿಗಳು, ಅಧ್ಯಾತ್ಮ ಚಿಂತಕರೂ ನೆಲಸಿದರು. ಪರಶಿವನ ಆಜ್ಞಾನುಸಾರ ಪರಶುರಾಮನು ದೇವಶಿಲ್ಪಿಯಾದ ವಿಶ್ವಕರ್ಮನನ್ನು ಕರೆಯಿಸಿಕೊಂಡು ಮಂಜುನಾಥನಿಗೆ ಸುಂದರವಾದ ಮಂದಿರವನ್ನು ನಿಮರ್ಾಣ ಮಾಡಿದನು. ವಿಶ್ವಕರ್ಮನ ಶಿಲ್ಪ ಕುಶಲತೆಯಿಂದ ಸುಂದರವಾದ ನಗರವೇ ನಿಮರ್ಾಣವಾಯಿತು. ಈ ನಗರದಲ್ಲಿ ಶ್ರೀಮಂತರೂ, ವರ್ತಕರೂ ನೆಲೆಸಿದರು. ಪರಶುರಾಮನು ಮಂಜುನಾಥ ಸ್ವಾಮಿಯ ಆಜ್ಞಾನುಸಾರ ಎಲ್ಲರೂ ದಾನ ಧರ್ಮಾದಿಗಳನ್ನು ನಡೆಸಿಕೊಂಡು ಬರುವಂತೆ ಎಲ್ಲ ವ್ಯವಸ್ಥೆಗಳನ್ನು ಮಾಡಿಸಿದನು. ಹಸ್ತಿ-ಅಶ್ವ-ರಥ-ಪದಾತಿಗಳ ಬಲದಿಂದ ನಗರ ರಕ್ಷಣೆಯ ಕಾರ್ಯವನ್ನು ಏರ್ಪಡಿಸಿದನು. ವಣರ್ಾಶ್ರಮ ಧರ್ಮಗಳಂತೆ ಪ್ರಜಾಜನರು ನಡೆದುಕೊಳ್ಳಲು ವಿಧಿಸಿದನು. ಈ ಕ್ಷೇತ್ರವು ಸಕಲ ಧರ್ಮಗಳ ನೆಲೆವೀಡಾಯಿತು. ಎಲ್ಲರೂ ದಾನಧರ್ಮಾದಿಗಳನ್ನು ನಡೆಸಿಕೊಂಡು ಬರುತ್ತಿದ್ದುದರಿಂದ ಈ ಕ್ಷೇತ್ರವು ಧರ್ಮಸ್ಥಳವೆಂದೇ ಕರೆಯಲ್ಪಟ್ಟಿತು. (ತುಳುವಿನಲ್ಲಿ ಈ ಪ್ರದೇಶವನ್ನು ‘ಕುಡಾಲ’ ಎಂದು ಕರೆಯುತ್ತಾರೆ. ‘ಕುಡು’ =  ‘ದಾನ’, ಕುಡುದಾನೆ ಎಂಬ ಸೂತ್ರದಂತೆ ಹಾಗೂ ‘ಆಳ’ – ಸ್ಥಳ-ದಾನ ಧಮರ್ಾದಿಗಳಿಂದ ಕೂಡಿರುವುದರಿಂದ ‘ಕುಡಾಲ’ ಎಂಬರ್ಥ ಬಂದಿದೆ ಎಂದು ದಿ| ಕಡವ ಶಂಭು ಶರ್ಮರಂತಹ ವಿದ್ವಾಂಸರ ಹೇಳಿಕೆಯಾಗಿದೆ.)
ಪರಶುರಾಮನ ತೇಜಸ್ಸಿಗೆ ಬೆದರಿ ಸೃಷ್ಟಿಗೊಂಡ ಈ ಪ್ರದೇಶ ಮುಂದೆ ಪರಶುರಾಮನ ಸೃಷ್ಟಿ ಎಂದೂ ಅವನ ಲೀಲೆಯ ಹಾಗೂ ತಪಸ್ಸಿನ ಭೂಮಿಯಾದುದರಿಂದ ಪರಶುರಾಮ ಕ್ಷೇತ್ರವೆಂದೂ ಕರೆಯಲ್ಪಟ್ಟಿತು.
ದೇವದೇವನ ಅರ್ಧಾಂಗಿಯಾದ ಪರಶಿವೆಯೂ ಈ ಕ್ಷೇತ್ರದ ಮಹಿಮೆಯನ್ನು ಕೇಳಿಕೊಂಡು ಇಲ್ಲೇ ಬಂದು ನೆಲೆಸಲು ಮನ ಮಾಡಿದಳು. ಮಂಜುನಾಥ ಸ್ವಾಮಿಯ ಆಜ್ಞಾನುಸಾರ ಸಪ್ತಕೋಟಿ ಮಂತ್ರಗಳೂರ ಈ ಕ್ಷೇತ್ರದಲ್ಲಿ ಸಪ್ತತೀರ್ಥಗಳಾಗಿ ನೆಲಸಿದವು. ಮಂಜುನಾಥನ ಸ್ಥಾನದಿಂದ ಪಶ್ಚಿಮ ದಿಕ್ಕಿನಲ್ಲಿ ಶಿವಪುಷ್ಕರಿಣಿ ಎಂಬ ಪ್ರಸಿದ್ಧ ತೀರ್ಥವೂ ಸನ್ನಿಹಿತವಾಗಿದೆ. ಮಹಾದೇವನ ಆಜ್ಞಾನುಸಾರ ಈಶಾನ್ಯ ದಿಕ್ಕಿನಲ್ಲಿ ಧರ್ಮವು ವಟವೃಕ್ಷ ರೂಪದಲ್ಲಿಯೂ, ಶಿವಪುಷ್ಕರಿಣಿಯು ಆಗ್ನೇಯ ದಿಕಿನಲ್ಲಿ ಅರ್ಥರೂಪವಾಗಿ ಅಶ್ವತ್ಥ ವೃಕ್ಷವೂ, ನೈಋತ್ಯ ದಿಕ್ಕಿನಲ್ಲಿ ಮೋಕ್ಷ ರೂಪವಾದ ಬಿಲ್ವವೃಕ್ಷವೂ ವಾಯುವ್ಯ ದಿಕ್ಕಿನಲ್ಲಿ ಇಷ್ಟ ಬಂದ ರೂಪ ಧರಿಸುವ ಕಾಮವು ನೆಲ್ಲಿಯ ವೃಕ್ಷದ ರೂಪದಲ್ಲಿಯೂ ನೆಲೆ ನಿಂತವು.
ಮಂಜುನಾಥ ದೇವರ ಪಶ್ಚಿಮ ಅಂಗಣದ ಪಕ್ಕದಲ್ಲಿ ಲೋಕಪಾವನೆಯಾದ ‘ಮಂಗಳೆ’ ಕಲಿಯುಗದ ಪ್ರಥಮ ಪಾದದ ಅಡಿಯಲ್ಲಿ ಅವತರಿಸಿಕೊಂಡಳೆಂದೂ ನೈಋತ್ಯ ದಿಕ್ಕಿನಲ್ಲಿ ಮಂಗಳಾಂಬಿಕೆಯ ಸನಿಹದಲ್ಲೆ ವಿನಾಯಕನೂ ದಕ್ಷಿಣದಲ್ಲಿ ಸತ್ಯನಾಥ (ಧರ್ಮಶಾಸ್ತಾರ)ನೂ (ರುದ್ರಾಕ್ಷಿ, ಮುಕುಟ, ಕರ್ಣಕುಂಡಲ, ಶ್ಯಾಮ ಯಜ್ಞೋಪವೀತಗಳನ್ನು ಧರಿಸಿಕೊಂಡು) ತೋರುವರೆಂದೂ ಹೇಳಿದೆ. ಮಂಜುನಾಥನ ಆಲಯದೊಳಗೆ ಪುರ್ವೂತ್ತರ ಭಾಗದಲ್ಲಿ ಹರಿಯ ಪ್ರತಿಮೆ ಇದೆ. ದಕ್ಷಿಣ ಪೂರ್ವಭಾಗದಲ್ಲಿ ಬ್ರಹ್ಮನ ಪ್ರತಿಮೆ ಇದೆ. ಅವರಿಬ್ಬರ ಉತ್ತರ ಭಾಗದಲ್ಲಿ ಸತ್ಯವತೀ ಪುತ್ರನಾದ ವ್ಯಾಸನ ಪ್ರತಿಮೆ ಇದೆ. ಹಾಗೆಯೇ ದಕ್ಷಿಣ ದ್ವಾರದಲ್ಲಿ ಶ್ರೀ ಮತ್ಸೇಂದ್ರನಾಥನ ಮೂರ್ತಿಯೂ, ಪಶ್ಚಿಮ ದ್ವಾರದಲ್ಲಿ ಶ್ರೀ ಗೋರಕ್ಷನಾಥನ ಮೂತರ್ಿಯೂ, ಉತ್ತರ ದ್ವಾರದಲ್ಲಿ ಕಂದಳ (ಚೌರಂಗಿ)ನಾಥನ ಮೂರ್ತಿಯೂ ಆಲಯಕ್ಕೆ ತಾಗಿಕೊಂಡಿದೆ. ಇವರೆಲ್ಲರೂ ಮಂಜುನಾಥನ ಉಪಾಸನೆ ಮಾಡಿಕೊಂಡಿರುವರೆಂದೂ ಕಾಶೀ ವಿಶ್ವೇಶ್ವರನ ಆಜ್ಞೆಯಂತೆ ಸಾಕ್ಷಾತ್ ಗಂಗಾ ಮಾತೆಯೇ ಈ ರಸಕೂಪದಲ್ಲಿ ಮಂಜುನಾಥನ ಸೇವೆಯಲ್ಲಿ ನಿರತಳಾಗಿರುವಳೆಂದೂ ಉಲ್ಲೇಖಗಳಿವೆ.
ಮೃತುಂಜಯ ಸ್ವರೂಪನಾಗಿ ಶ್ರೀ ಮಂಜುನಾಥನು ಇಲ್ಲಿ ನೆಲಸಿ ಭಕ್ತರ ಇಷ್ಟಾರ್ಥವನ್ನು ಪೂರೈಸುವವನಾದ ತೌಳವಾಧಿಪತಿ ಎಂದು ಕೀರ್ತಿ ಪಡೆದಿದ್ದಾನೆ. ಮಂಜುನಾಥನ ಹೇಳಿಕೆಯಂತೆ ಪರಶುರಾಮನು ಎಲ್ಲ ಆಡಳಿತ ವ್ಯವಸ್ಥೆಗಳನ್ನೂ ಮಾಡಿದ್ದಾನೆ. ಪರಶುರಾಮ ಸೃಷ್ಟಿಯೆಂದು ಕರೆಯಲ್ಪಡುವ ಈ ಭೂಭಾಗವನ್ನು ಕೇರಳ, ತೌಳವ, ಹೈಗ, ಕೊಂಕಣ ಎಂಬುದಾಗಿ ನಾಲ್ಕು ವಿಭಾಗ ಮಾಡಿ, ಅಲ್ಲಲ್ಲಿಗೆ ರಾಜರನ್ನೂ ಯುಕ್ತ ಪರಿಹಾರವನ್ನೂ ನೇಮಕ ಮಾಡಿದ್ದಾನೆ. ಅದರಲ್ಲಿ ತೌಳವ ದೇಶ ಬಹಳ ಪುಣ್ಯಶಾಲಿ. ಏಕೆಂದರೆ ಇಲ್ಲಿ ಸಾಕ್ಷಾತ್ ಮಂಜುನಾಥನೇ ನೆಲಸಿದ್ದಾನೆ. ಈ ನಾಲ್ಕು ದೇಶಗಳೂ ಸುಖ ಸಮೃದ್ಧಿಯಿಂದ ರಾಜ್ಯ ಕಾರ್ಯಗಳನ್ನು ಮಾಡುತ್ತಿವೆ. ಬ್ರಾಹಣ್ಮರು, ಜಪ, ತಪ, ಹೋಮ, ನೇಮಗಳನ್ನು ನಿಭರ್ೀತಿಯಿಂದ ಆಚರಿಸಿಕೊಂಡು ಲೋಕವು ಸುಭಿಕ್ಷಗೊಳ್ಳಲೆಂದು ಪ್ರಾಥರ್ಿಸುತ್ತಿದ್ದಾರೆ. ಪರಶುರಾಮನು ವಣರ್ಾಶ್ರಮ ಧರ್ಮಗಳನ್ನು ಪಾಲಿಸುವಂತೆ ನೇಮಕಗೊಳಿಸಿದನು. ಇದರಿಂದ ಪ್ರಜೆಗಳು ಧರ್ಮಸಂಪನ್ನರಾಗಿ ಸ್ವಕರ್ಮನಿರತರಾಗುತ್ತಿದ್ದರು. ನೆಲ-ಜಲಗಳಲ್ಲಿ ಸಂಪತ್ತು ಸಮೃದ್ಧಿಯಾಗಿರುತ್ತಿತ್ತು. ವೇದ ಶಾಸ್ತ್ರಾದಿಗಳನ್ನು ಅಭ್ಯಾಸ ಮಾಡಿ ಬ್ರಾಹ್ಮಣರು ನಾಡಿನ ಸಂಸ್ಕೃತಿಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಭಕ್ತರು ಅನನ್ಯ ಭಾವನೆಯಿಂದ ಭಜಿಸಿದರೆ ಇಲ್ಲಿ ಕಾಶಿ, ಗಯೆ, ಕುರುಕ್ಷೇತ್ರ, ರಾಮೇಶ್ವರಗಳನ್ನು ಸಂದರ್ಶಿದ ಪುಣ್ಯ ಲಾಭವು ಶ್ರೀ ಮಂಜುನಾಥನ ದರ್ಶನದಿಂದ ಲಭಿಸುವುದಾಗಿಯೂ ಭಾರದ್ವಾಜ ಮುನಿಗಳು ತಮ್ಮ ಶಿಷ್ಯ ಸುಮಂತುವಿಗೆ ಬೋಧಿಸಿದರು. ಸುಮಂತು ತನ್ನ ಸಂದೇಹ ನಿವಾರಣೆಗೋಸ್ಕರ ಮಂಜುನಾಥನು ಮುಂದೆ ತನ್ನ ಲೀಲೆಯನ್ನು ಲೋಕಕ್ಕೆ ತೋರಿಸಿಕೊಟ್ಟ ವಿಚಾರವಾಗಿ ಪ್ರಶ್ನಿಸಿದರು. ಮಂಜುನಾಥನು ನವನಾಥರಾಗಿ ಲೋಕ ಕಲ್ಯಾಣ ಕಾರ್ಯವನ್ನು ಸಾಧಿಸಿದ ವಿಚಾರವನ್ನು ಹೇಳಬೇಕೆಂದು ಕೇಳಿಕೊಂಡನು.
ನವನಾಥರ ಕಥೆ
ಮಂಜುನಾಥನಾಗಿ ಅವತರಿಸಿದ ದೇವದೇವನು ತನ್ನ ಲೀಲೆಯನ್ನು ಜಗತ್ತಿಗೆ ತೋರಿಸಬೇಕೆಂದು ಬಯಸಿದನು. ತನ್ನ ಭಕ್ತರ ಇಷ್ಟಾರ್ಥವನ್ನು ಪೂರೈಸುವುದಕ್ಕಾಗಿ ನವನಾಥರ ರೂಪವನ್ನು ಧರಿಸಿದನು. ಅವರಲ್ಲಿ ಆದಿನಾಥನು ಸಾಕ್ಷಾತ್ ಪರಶಿವನೇ ಅವತಾರವೆತ್ತಿ ಬಂದ ಯೋಗ ಲೀಲಾರೂಪನಾಗಿದ್ದನು. ಅವನು ತನ್ನ ಯೋಗರೂಪದ ಮಾಯೆಯನ್ನು ಬೀರಿ ಮತ್ಸ್ಯೇಂದ್ರನಾಥನನ್ನು ತನ್ನ ಔರಸ ಪುತ್ರನನ್ನಾಗಿ ಪಡೆದನು. ಪರಶಿವನು ತನ್ನ ಲೀಲಾರೂಪವನ್ನು ಕಂದಳ (ಚೌರಂಗಿ)ನಾಥ ಅಥವಾ ಕಂಥಡನಾಥನಾಗಿಯೂ, ಗೋರಕ್ಷನಾಥನಾಗಿಯೂ, ಕೊಂಕಣನಾಥ(ರವಳನಾಥ)ನಾಗಿಯೂ, ಆನಂಗನಾಥನಾಗಿಯೂ, ಜಲಂಧರನಾಥನಾಗಿಯೂ, ಭುಜಗನಾಥನಾಗಿಯೂ, ಅರುಣಾಚಲ ನಾಥ ನಾಗಿಯೂ ಪ್ರಕಟಿಸುತ್ತಾ ತನ್ನ ನೂತನ ಪಂಥವೊಂದನ್ನು ಆರಂಭಿಸಿದನು. ಆ ಪಾರ್ವತೀಪತಿಯಾದ ಪರಮೇಶ್ವರನ ಚರಿತ್ರೆಗೆ ಪಾರವೇ ಇಲ್ಲ. ಸವರ್ಾತ್ಮವಾದ ನಾಥ ಸ್ವರೂಪವೇ ಶ್ರೀಮನ್ನಾರಾಯಣನಿಗೆ ಪ್ರಿಯವಾದುದು. ಮಹಾಯೋಗಿಯಾಗಿ ಭೂತನಾಥನಾದ ಆದಿನಾಥನು ತನ್ನ ಯೋಗ ಲೀಲೆಯನ್ನು ಜಗತ್ತಿಗೆ ಸಾರಬೇಕೆಂದು ಬಯಸಿ ರೋಗಮಾಯೆಯಿಂದ ಆದಿನಾಥನಾದನು. ತನ್ನ ಲೀಲೆಗಾಗಿ ‘ನಾದನಿಧಿ’ ಎಂಬ ಬಾಲಕನಾಗಿ ಜನ್ಮವೆತ್ತಿ ಮೀನನಾಥನಾದನು.
ಕಲ್ಪಾಂತರದಲ್ಲಿ (ಬ್ರಹ್ಮನ ಆಯುಸ್ಸಿನ ಪ್ರಮಾಣ) ದಕ್ಷಿಣ ಸಮುದ್ರ ತೀರದಲ್ಲಿ ಆತ್ಮನಿಧಿ ಎಂಬ ಬ್ರಾಹ್ಮಣನಿದ್ದನು. ಸಕಲ ವೇದ ಶಾಸ್ತ್ರಾದಿಗಳನ್ನು ಕಲಿತು ಆ ಆತ್ಮನಿಧಿಯು ನಿಷ್ಠಾವಂತನಾಗಿ ಜೀವಿಸುತ್ತಿದ್ದನು. ದಯಾವತಿ ಎಂಬ ಸಾಧ್ವಿ ನಾರೀಮಣಿ ಅವನ ಮಡದಿ. ಸತಿ ಪತಿಯರು ವ್ರತನೇಮಗಳಿಂದ ಹೊಂದಿಕೊಂಡಿದ್ದರು. ಸದಾಕಾಲ ದೇವರನ್ನು ಭಜಿಸುತ್ತಿದ್ದರೂ ಅವರಿಗೆ ಸಂತಾನ ಪ್ರಾಪ್ತಿ ಆಗಲಿಲ್ಲ. ದುಃಖದಿಂದ ಹೀಗೆಯೇ ಕೆಲಕಾಲ ಕಳೆಯಲು ಒಂದು ದಿನ ಕಾವಿ ವಸ್ತ್ರವನ್ನುಟ್ಟ ಸಿದ್ಧನಾಥ ಯೋಗಿಯೊಬ್ಬನು ಅಲ್ಲಿಗೆ ಬಂದನು. ಕದಲೀವನ ಕ್ಷೇತ್ರಕ್ಕೆ ಹೋಗಿ ಮಂಜುನಾಥ ಸ್ವಾಮಿಯನ್ನು ಭಜಿಸುವಂತೆ ಏಕಾದಶಾಕ್ಷರೀ ಮಂತ್ರೋಪದೇಶವಿತ್ತನು. ಆ ನಾಥಯೋಗಿಯು ಆತ್ಮನಿಧಿಯನ್ನು ಅನುಗ್ರಹಿಸಿ ಶ್ರೀ ಶೈಲಕ್ಕೆ ತೆರಳಿದನು. ಆತ್ಮನಿಧಿಯು ಸತಿಯಿಂದೊಡಗೂಡಿ ಕದಲೀ ಮಂಜುನಾಥನ ಸನ್ನಿಧಿಗೆ ಬಂದನು. ಹನ್ನೆರಡು ದಿನಗಳ ವ್ರತವನ್ನಾಚರಿಸಿದನು. ಸಿದ್ಧನಾಥ ಯೋಗಿಯು ಹೇಳಿದಂತೆ ನಡೆದುಕೊಂಡನು. ಮಂಜುನಾಥ ಸ್ವಾಮಿಯು ಕನಸಿನಲ್ಲಿ ಆ ದಂಪತಿಗಳಿಗೆ ಕಾಣಿಸಿಕೊಂಡು ಇಷ್ಟಾರ್ಥವು ಸಿದ್ಧಿಸುವುದೆಂದು ಹರಸಿದನು. ಹದಿಮೂರನೆಯ ದಿನ ಆ ದಂಪತಿಗಳು ಕೃತಕೃತ್ಯರಾರೆವೆಂದು ತಮ್ಮ ಮನೆಗೆ ಹಿಂತಿರುಗಿದರು.
ಶಿವನ ಅಪ್ಪಣೆಯಂತೆ ಒಂದು ದಿನ ದಯಾವತಿಯು ತನ್ನ ಮನೆಯ ಸಮೀಪದ ತಾವರೆ ಕೊಳದಲ್ಲಿ ಸ್ನಾನ ಮಾಡಲು ಹೋಗಿದ್ದಾಗ ಆಶ್ವರ್ಯವೊಂದನ್ನು ಕಂಡಳು. ಮಂಜುನಾಥನು ಕನಸಿನಲ್ಲಿ ಅನುಗ್ರಹಿಸಿದಂತೆ ಎಳೆಯ ಶಿಶುವೊಂದು ಕಮಲ ಪುಷ್ಪದ ಮೇಲೆ ಮಲಗಿರುವುದನ್ನು ನೋಡಿದಳು. ಅವಳ ಎದೆಯಲ್ಲಿ ಹಾಲುಕ್ಕಿ ಬಂತು. ಕಮಲಪುಷ್ಪದ ಮೇಲೆ ಪವಡಿಸಿದ್ದ ಆ ಸಿದ್ಧನಾಥ ಶಿಶುವನ್ನೆತ್ತಿಕೊಂಡು ಮೊಲೆಯೂಡಿಸಿದಳು. ಮನೆಗೆ ತಂದು ಆನಂದದಿಂದ ಸತಿಪತಿಯರು ನಲಿದಾಡಿದರು. ಮಗುವಿನ ಬಾಲಲೀಲೆಯನ್ನೆಲ್ಲ ಕಂಡು ಆನಂದಿಸಿದರು. ‘ನಾಧನಿಧಿ’ ಎಂಬುದಾಗಿ ಆ ಮಗುವಿಗೆ ಅನುಗುಣವಾದ ನಾಮಕರಣವನ್ನು ಮಾಡಿದರು.
ನಾಧನಿಧಿಯು ಬಾಲಲೀಲೆಯೊಂದಿಗೆ ಬೆಳೆದನು. ತನ್ನ ವಯಸ್ಸಿನ ಬಾಲಕರೊಂದಿಗೆ ಓಡಾಡುತ್ತಲೂ ಜಲಕ್ರೀಡೆಯಾಡುತ್ತಲೂ ಇದ್ದನು. ಒಂದು ದಿನ ಜಲಕ್ರೀಡೆಯಾಡುತ್ತಿದ್ದಾಗ ಸಿಡಿಲು, ಮಿಂಚು, ಗುಡುಗು, ಮಳೆ, ಬಿರುಗಾಳಿಗಳು ಏಕಕಾಲದಲ್ಲಿ ಅಬ್ಬರಿಸಿದಂತಾಯಿತು. ಬಾಲಕರೆಲ್ಲ ದಿಕ್ಕುಗಾಣದೆ ಓಡತೊಡಗಿದರು. ನಾಧನಿಧಿಯು ಎಲ್ಲರನ್ನು ಸಂತೈಸುತ್ತಿದ್ದನು. ಆಗಲೇ ಚಲಿಸುವ ಮಂದರ ಪರ್ವತದಂತೆ ಒಂದು ಮಹಾ ಮತ್ಸ್ಯವು ಬಾಲಕನ ಬಳಿಗೆ ಬಂದಿತು. ಎಲ್ಲರೂ ನೋಡುತ್ತಿದ್ದಂತೆಯೇ ಧೈರ್ಯದಿಂದ ಬಾಲಕನಾದ ನಿಧಿಯನ್ನು ನುಂಗಿತು. ಈ ವಾತರ್ೆಯು ಪುರದ ಜನರಿಗೆಲ್ಲ ದಿಗ್ಭ್ರಮೆಯನ್ನುಂಟುಮಾಡಿತು. ಆತ್ಮನಿಧಿಯೂ ದಯಾವತಿಯೂ ಓಡಿ ಬಂದರು, ಗೋಳಿಟ್ಟರು. ಪುರಜನರು ಆ ದಂಪತಿಗಳನ್ನು ಸಂತೈಸುತ್ತಲೂ ಆ ಮತ್ಸ್ಯವನ್ನು ಹುಡುಕುವ ಸಾಹಸವನ್ನು ಮಾಡುತ್ತಲೂ ಇದ್ದರು. ಆ ಬಾಲಕನ ಕುರಿತು ಎಲ್ಲರಿಗೂ ಕರುಣೆಯುಂಟಾಯಿತು.
ಹೀಗೆಯೇ, ಸ್ವಲ್ಪ ಹೊತ್ತು ಕಳೆದಾಗ, ‘ಎಲೈ ಆತ್ಮನಿಧಿಯೇ, ಆ ಬಾಲಕನಿಗಾಗಿ ನೀನು ದುಃಖ ಪಡಬೇಡ, ಅವನು ಭೂತನಾಥನ ನೇಮದಂತೆ ಮಹಾಯೋಗಿಯಾಗುವನು. ಮತ್ಸ್ಯೋದರದಲ್ಲಿಟ್ಟುಕೊಂಡು ಯೋಗ ನಿರತನಾಗಿ ಈ ಪ್ರಪಂಚದ ಜೀವಜಾಲದ ಅರಿವನ್ನು ಮಾಡಿಕೊಳ್ಳುವನು. ನಿನಗೆ ಬೇರೆ ಸಂತತಿಯಾಗುವುದು. ನೀನು ಆ ಬಾಲಕನ ಯೋಚನೆಯನ್ನು ಬಿಟ್ಟು ಹಿಂತೆರಳು ಎಂಬ ಅಶರೀರವಾಣಿಯೊಂದು ಕೇಳಿಸಿತು. ಇದರಿಂದ ಸಮಾಧಾನಗೊಂಡು ಆತ್ಮನಿಧಿಯು ಪರಶಿವನನ್ನು ಭಜಿಸುತ್ತಾ ಮಕ್ಕಳು ಮೊಮ್ಮಕ್ಕಳನ್ನು ಪಡೆದು ಬಹುಕಾಲ ಬಾಳಿ ಕೀತರ್ಿಶಾಲಿಯಾದನು.
ಇತ್ತ ನಾದನಿಧಿಯು ಮತ್ಸ್ಯೋದರವಾಸಿಯಾಗಿದ್ದು ಯೋಗ ನಿರತನಾದನು. ಸಮಸ್ತ ಪ್ರಾಣಿಗಳ ದೇಹ ರಚನೆಯ ನಿಯಮಗಳೇ ಮೊದಲಾದ ಜ್ಞಾನ ಸಿದ್ಧಿಯನ್ನು ಗಳಿಸಿದನು. ಹೀಗೆ ಹಲವು ಯುಗಗಳನ್ನೇ ಕಳೆದನು. ಆ ಮೀನಿಗೂ ಮುಪ್ಪಡರಿತು. ಆ ಮಹಾತ್ಮನನ್ನು ಜಠರದಲ್ಲಿರಿಸಿಕೊಂಡು ಆ ಮತ್ಸ್ಯವು ಆವರೆಗೆ ಸಂತೋಷದಿಂದ ದಿನ ಕಳೆಯುತ್ತಿತ್ತು. ಮುಂದೆ ಒಂದು ದಿನ ಶಕ್ತಿಗುಂದಿ ನಿಂತಲ್ಲೇ ಅಸುನೀಗಿತು. ಆ ವಿೂನವು ನಿಂತ ಸ್ಥಳ ವಿೂನದ್ವೀಪವೆಂದು ಪ್ರಸಿದ್ಧಿಗೊಂಡಿತು. ಮಹಾತ್ಮನಾದ ನಾದನಿಧಿಯು ಆ ಮೀನೋದರವನ್ನೇ ತನ್ನ ಯೋಗ ಭೂಮಿಯನ್ನಾಗಿ ಮಾಡಿ ಜ್ಞಾನ ನಿಧಿಯಾಗಿ ಅದರೊಳಗೆ ನೆಲಸಿದನು.
ಆದಿನಾಥನಾಗಿ ಕೈಲಾಸದಿಂದ ಹೊರಟಿದ್ದ ಪತ್ನಿಯಾದ ಗಿರಿಜೆಗೆ ಯೋಗ ರಹಸ್ಯವನ್ನು ತಿಳಿಸಲು ಬಯಸಿದ್ದನು. ರಹಸ್ಯವಾದ ವಿಚಾರವನ್ನು ರಹಸ್ಯವಾಗಿಯೇ ಹೇಳಬೇಕೆಂದು ನಿರ್ಧರಿಸಿ ವಿೂನದ್ವೀಪವನ್ನು ಸೇರಿದನು. ಅಲ್ಲಿ ಗಿರಿಜೆಯೊಡನೆ ಜೀವನ ರಹಸ್ಯವನ್ನೂ ಯೋಗ ರಹಸ್ಯವನ್ನೂ ಹೇಳುತ್ತಿದ್ದಂತೆಯೇ ಮಹಾಯೋಗಿಯಾದ ನಾದನಿಧಿಯು ಆ ಉಪದೇಶ ವಾಣಿಗಳನ್ನೆಲ್ಲ ಕೇಳಿಕೊಂಡನು. ತನಗಿದ್ದ ಸಂದೇಹಗಳನ್ನು ಪ್ರಶ್ನಿಸಲು ಆರಂಭಿಸಿದನು. ತನ್ನ ಜನ್ಮ ರಹಸ್ಯವನ್ನೂ ತಾನೀ ಮೀನೊಂದರಲ್ಲಿ ಎಷ್ಟು ಕಾಲದಿಂದ ಏಕಾಗಿ ಇದ್ದೇನೆ ಎಂಬಿತ್ಯಾದಿ ವಿಚಾರಗಳನ್ನು ಒಂದೊಂದಾಗಿ ಪ್ರಶ್ನಿಸಿದನು. ಆ ನಿರ್ಜನ ಪ್ರದೇಶದಲ್ಲಿ ಅಶರೀರವಾಣಿ ಎಲ್ಲಿಂದ ಕೇಳುವುದು ಎಂಬುದಾಗಿ ಗಿರಿಜೆ ಅಚ್ಚರಿಗೊಂಡಳು. ಸಕಲವನ್ನೂ ತಿಳಿದ ಗಿರಿಜೇಶನು ಮೀನ ದ್ವೀಪದ ರಹಸ್ಯವನ್ನೂ ಪ್ರಪಂಚದ ಮಾಯೆಯನ್ನೂ ಉಪದೇಶಿಸಿ ಆ ಬಾಲಯೋಗಿಯನ್ನು ತನ್ನ ಔರಸ ಪುತ್ರನನ್ನಾಗಿ ಸ್ವೀಕರಿಸಿದನು. ಯೋಗಿನಾಥನಾದ ಶಿವನು ಆತ್ಮ ಜ್ಞಾನವನ್ನೂ ಅದರ ರಹಸ್ಯವನ್ನೂ ಉಪದೇಶಿಸಿ ನಾದನಿಧಿಗೆ ಗುರುವಾದನು. ಈ ಗುರುಶಿಷ್ಯರ ಸಂವಾದದಿಂದ ತಿಳಿದು ಬಂದ ವಿಚಾರಗಳೆಲ್ಲವೂ ಪ್ರಪಂಚದ ಜೀವ ಕೋಟಿಗಳ ಸೃಷ್ಟೀಕರಣ ರಹಸ್ಯಗಳಿಂದ ಕೂಡಿದ್ದು ಮುಂದಿನ ನಾಥರಿಗೆಲ್ಲ ಮಾರ್ಗದರ್ಶನವಾಯಿತು. ಹೀಗೆ ಅನುಗ್ರಹಿಸಿದ ಮಹೇಶ್ವರನು ಶಿವೆಯನ್ನು ಕೂಡಿಕೊಂಡು ಮತ್ತೆ ಕೈಲಾಸಕ್ಕೆ ತೆರಳಿದನು.
ಪರಶಿವನಿಂದ ವಿಾನನಾಥನೆಯ ನಾಮಕರಣಗೊಂದ ಮಮಹಾಯೋಗಿ ನಾಥನು ಆ ವಿಾನ ದ್ವೀಪದಲ್ಲಿ ತನ್ನ ನಿತ್ಯಾನುಷ್ಠಾನಗಳನ್ನು ಮಾಡಿಕೊಂಡು ವಿಾನಾಸನದಲ್ಲೇ ಇರತೊಡಗಿದನು. ಅಷ್ಟಾಂಗ ಯೋಗಗಳನ್ನು ಸಿದ್ಧಿಸಿಕೊಂಡು ತ್ರಿಕಾಲಜ್ಞಾನಿಯಾಗಿ ಎಲ್ಲ ಆಸನಗಳನ್ನು ಸ್ವಾಧೀನಪಡಿಸಿಕೊಂಡನು, ಆತ್ಮಜ್ಞಾನಿಯಾದನು. ತನ್ನ ಯೋಗ ಬಲದಿಂದ ಸಮಸ್ತವನ್ನೂ ಜೈಸಿಕೊಂಡನು. ದೇವತೆಗಳೂ ಅಷ್ಟ ದಿಕ್ಪಾಲಕರೂ ಎಲ್ಲಿ ಬೇಕೆಂದರಲ್ಲಿ ಆ ಸಿದ್ಧಯೋಗಿ ವಿಾನನಾಥನ ರಕ್ಷಣೆಗೆ ಸಿದ್ಧರಿರುತ್ತಿದ್ದರು. ಸಿದ್ಧಿ ಪಡೆದ ಆ ವಿಾನನಾಥನು ಆಚಾರವೇ ಬ್ರಾಹ್ಮಣಕ್ಕೆ ಕಾರಣವೆಂಬುದನ್ನು ಬೋಧಿಸುತ್ತ ಬಂದನು. ಯೋಗ ಬಲದಿಂದ ಮೃತ್ಯುವನ್ನೇ ಜಯಿಸಿ ಮೃತ್ಯುಂಜಯನಾದನು.
ಯೋಗ ಸಿದ್ಧಿ ಪಡೆದ ಮತ್ಸ್ಯೇಂದ್ರನಾಥನು ಧರ್ಮ ಪ್ರಚಾರ ಕಾರ್ಯಕ್ಕೆ ಮನಸ್ಸು ಮಾಡಿದನು. ತನ್ನ ಕಾರ್ಯ ಸಾಧನೆಗಾಗಿ ಪುರುಷಾರ್ಥಗಳಲ್ಲಿ ಮೂರನೆಯದಾದ ಕಾಮವೇ ಪ್ರಕೃತಿ ತನ್ನ ಲೀಲೆಗೆ ಒದಗಿ ಬರಬೇಕಾದುದೆಂದು  ಬಗೆದನು. ಸ್ತ್ರೀಯರ ಭಾಗ್ಯದಿಂದ ಅವನಿಗೆ ಪ್ರಾಪ್ತವಾದ ಯೌವನ ಸಂಪತ್ತು, ರೂಪ ಸಂಪತ್ತುಗಳು ಶೋಭಿಸುತ್ತಿದ್ದಂತೆ ಅವನ ಆಸ್ಥಾನದಲ್ಲಿ ಮನ್ಮಥನೇ ಓಲಗಿಸುವುದಕ್ಕೆ ಬಂದನು. ರತ್ನ, ಕಿರೀಟ, ಧವಳ, ಚಾಮರ, ಶ್ವೇತಚ್ಛತ್ರ, ಪೀತಾಂಬರ, ವಸನವೇ ಮುಂತಾದ ರಾಜ ಚಿಹ್ನೆಗಳಿಂದೊಡಗೂಡಿ ರಾಜಲಕ್ಷ್ಮಿಯೂ ಮೀನನಾಥನನ್ನೊಲಿದುಕೊಂಡಳು. ಈ ಸ್ವರೂಪದ ಮೀನನಾಥನಿಗೆ ಆಜ್ಞಾಧಾರಿಗಳಾದ ಅನೇಕರು ಶಿಷ್ಯರಾದರು. ಅವರ ಮಧ್ಯದಲ್ಲಿ ಗೋರಕ್ಷನೆಂದು ಪ್ರಸಿದ್ಧನಾದ ಶಿವಯೋಗ ಜ್ಞಾನಸಂಪನ್ನನಾದ ವರ್ಚಸ್ವಿಯು ಪ್ರದಾನ ಶಿಷ್ಯನಾದನು. ಇವನು ನಿತ್ಯ ಬಾಲ ಸ್ವರೂಪಿಯಾಗಿದ್ದು ಯೋಗ ಸಿದ್ಧಿಯನ್ನು ಪಡೆದವನಾಗಿದ್ದನು. ಭೂತನಾಥನಾದ ಮಂಜುನಾಥನ ನವನಾಥರ ಲೀಲೆಯಲ್ಲಿ ಇವನೂ ಒಬ್ಬನಾಗಿದ್ದಾನೆ.
ಪುಣ್ಯ ಭೂಮಿಯಾದ ಆಯರ್ಾವರ್ತದಲ್ಲಿ ಅಭೀರನೆಂಬ ಸತ್ಕರ್ಮ ನಿರತ ಗೃಹಸ್ಥನಿಗೆ ಪರಮ ಸಾಥ್ವಿಯಾದ ಪತ್ನಿ ಗೋಮತಿಯಲ್ಲಿ ಸೂರ್ಯದೇವನ ಅನುಗ್ರಹದಿಂದ ತೇಜಸ್ವಿ ಎಂಬ ಬಾಲಕನು ಜನಿಸಿದನು. ಆ ಬಾಲಕನೇ ಮುಂದೆ ಗೋರಕ್ಷನಾಥನೆಂದು ಅನ್ವರ್ಥನಾಮವನ್ನು ಗಳಿಸಿದನು. ಬಾಲಬುದ್ಧಿಗೂ ಮೀರದ ಕೆಲವು ಕೃತ್ಯಗಳಿಂದ ತೇಜಸ್ವಿ ಎಂಬ ಆ ಬಾಲಕನು ತನ್ನ ಲೀಲೆಯಿಂದ ಮಹಾಜ್ಞಾನಿ ಎನ್ನಿಸಿಕೊಂಡನು. ಬಾಲಕರೊಡನೆ ಸೇರಿ ಗೋರಕ್ಷಣಾ ಕಾರ್ಯದಲ್ಲೇ ನಿರತನಾದ ಆ ಬಾಲಕನು ಎಲ್ಲೆಡೆಯೂ ಗೋವುಗಳಿಗಾಗಿ ಹುಲ್ಲು ಹಸಿರನ್ನು ಹೆಚ್ಚಿಸಿದನ. ಹೂ ಹಣ್ಣುಗಳಿಂದ ಫಲಭರಿತ ವೃಕ್ಷಗಳು ಶೋಭಿಸುವಂತೆ ಮಾಡಿದನು. ತನ್ನ ಪುತ್ರನ ಲೀಲೆಯನ್ನು ನೋಡಿ ಗೋಮತೀದೇವಿ ಹಿಗ್ಗಿಕೊಳ್ಳುತ್ತಿದ್ದಳು ಹೀಗಿರಲು ಒಮ್ಮೆ ಒಂದು ಮಾವಿನ ಮರದ ಬುಡದಲ್ಲಿ ಆಟವಾಡುತ್ತಿದ್ದ ಬಾಲಕರ ಗುಂಪಿನ ಎದುರಿಗೆ ಗೋರಕ್ಷಕನನ್ನು ಉದ್ಧರಿಸುವುದಕ್ಕಾಗಿ ಮೀನನಾಥನು ಬಂದನು. ಯೋಗಿಗಳ ವೇಷವನ್ನು ಧರಿಸಿದ್ಧ ಆ ಮೀನನಾಥನಿಗೆ ಮಾವಿನ ಮರದಲ್ಲಿ ತೋರುತ್ತಿದ್ದ ಒಂದೇ ಒಂದು ಮಾವಿನ ಹಣ್ಣು ಬೇಕೆನಿಸಿತು. ಆ ಗೋಪಾಲಕರೊಡನೆ ತನ್ನಿಚ್ಛೆಯನ್ನು ಹೇಳಿಕೊಂಡನು. ಕಲ್ಲುಗಳನ್ನೆಸೆದು ಮಾವಿನ ಹಣ್ಣನ್ನು ಬೀಳಿಸಲು ಯತ್ನಿಸಿ ವಿಫಲರಾದ ಬಾಲಕರು ಮನೆಯ ಕಡೆಗೆ ಹೋಗ ಬಯಸಿದರು. ಆದರೆ ತೇಜಸ್ವಿಯು ಅದೇ ಕಾರ್ಯದಲ್ಲಿ ನಿರತನಾಗಿ, ತನ್ನ ಮನೆಯ ಹಸುಗಳನ್ನು ಹೊಡೆದುಕೊಂಡು ಹೋಗಲು ಇತರ ಬಾಲಕರಿಗೆ ಆದೇಶ ನೀಡಿದನು. ಸಂಜೆಯಾಗಿ ರಾತ್ರೆ ಕಳೆದು ಬೆಳಗಾದರೂ ಆ ಬಾಲಕನು ಹಣ್ಣನ್ನು ನಾಥ ಯೋಗಿಗೆ ತಂದೊಪ್ಪಿಸದೆ ವಿರಮಿಸಲಾರೆನೆಂದು ನಿರ್ಧರಿಸಿದನು. ಕೊನೆಗೆ ಆ ಬಾಲಕನು ಕೃತಕೃತ್ಯನಾದನು. ಹಣ್ಣು ಮರದಿಂದ ಕೆಳಗೆ ಬಿದ್ದಿತು. ಅದನ್ನು ಆ ಮೀನನಾಥನಿಗೊಪ್ಪಿಸಿದನು. ಮೀನನಾಥನು ಹರ್ಷಗೊಂಡು ಸಾಧಕನಾದ ಆ ಬಾಲಕನನ್ನು ಮೈದಡವಿ ತನ್ನ ಶಿಷ್ಯನನ್ನಾಗಿ ಸ್ವೀಕರಿಸಲು ನಿರ್ಧರಿಸಿದನು. ಗೋರಕ್ಷನಾಥನೆಂದು ಆ ತೇಜಸ್ವಿಯನ್ನು ಕರೆದು ತನ್ನೊಂದಿಗೆ ಬರುವಂತೆ ಹೇಳಿದನು.
ಅಷ್ಟರಲ್ಲೇ ಒಂದು ಆರ್ತನಾದವು ಕೇಳಿಸಿತು. ಅದು ಎಲ್ಲಿಂದ? ಏತರದು? ಎಂಬ ವಿಚಾರ ಮೀನನಾಥನಿಗೆ ತಿಳಿದಿದ್ದರೂ ತಿಳಿಯದವನಂತೆ ನಟಿಸಿ ಆಶ್ಚರ್ಯ ಪಟ್ಟನು. ಆ ಮೇಲೆ ಇಬ್ಬರೂ ಆರ್ತನಾದವು ಕೇಳಿದೆಡೆಗೆ ಹೋದರು. ದಾರಿಯ ಪಕ್ಕದಲ್ಲಿ ಕೈಕಾಲು ಕತ್ತರಿಸಲ್ಪಟ್ಟ ಯುವಕನೊಬ್ಬನು ಅಳುತ್ತಿರುವುದನ್ನು ಕಂಡರು. ಆತನನ್ನು ಶುಶ್ರೂಷೆ ಮಾಡುವುದರೊಂದಿಗೆ ಆತನ ಯೋಗಕ್ಷೇಮವನ್ನು ವಿಚಾರಿಸಿದನು.
ಚೌರಂಗಿ ಎಂಬ ಆ ರಾಜ ಕುಮಾರನಿಗೆ ಅವನ ತಂದೆಯೇ ವಿಧಿಸಿ ಘೋರ ಶಿಕ್ಷೆ ಕೈಕಾಲುಗಳನ್ನು ಕತ್ತರಿಸಿ ಬಿಸಾಡುವ ಈ ದಂಡನೆಯಾಗಿತ್ತು. ಪುಷ್ಪಪುರವೆಂಬ ರಾಜ್ಯ, ಅಲ್ಲಿಂದ ಒಂದು ಯೋಜನ ದೂರದಲ್ಲಿತ್ತು. ಅಲ್ಲಿನ ರಾಜನು ಮಹಾಬಲನೆಂಬವನು ಚೌರಂಗಿಯ ತಂದೆ. ಚೌರಂಗಿ ಗುರುಕುಲದಲ್ಲಿದ್ದು ಸಕಲ ವಿದ್ಯಾ ಸಂಪನ್ನನಾಗಿ ಹಿಂದಿರುಗಿದ್ದನು. ತಂದೆ ಮಗನಿಗೆ ಪಟ್ಟ ಕಟ್ಟಿ ವಿಂಧ್ಯಾ ವಾಸಿನಿಯಾದ ದೇವಿಯನ್ನು ಆರಾಧಿಸುವುದಕ್ಕೆಂದು ತೆರಳಿದ್ದನು. ಅಂತ:ಪುರದ ದಾದಿ (ಚೌರಂಗಿಯ ಸಾಕುತಾಯಿ) ಹಾಗೂ ಧೂರ್ತನಾದ ವಂಶಧರನೊಬ್ಬನ ದುರ್ವರ್ತನೆಗಳನ್ನು ಕಂಡ ರಾಜಕುಮಾರನು ಅವರನ್ನು ದಂಡಿಸಿದನು. ಇದರಿಂದ ರಾಜಕುಮಾರನ ಮೇಲೆ ಅವರಿಗೆ ದ್ವೇಷ ಉಂಟಾಯಿತು. ರಾಜನು ಹಿಂದಿರುಗಿದ ಬಳಿಕ, ರಾಜಕುಮಾರ ಚೌರಂಗಿಯ ಮೇಲೆ ರಾಜದ್ರೋಹದ ಆರೋಪವನ್ನು ಹೊರಿಸಿ, ಆ ಧೂರ್ತರು ರಾಜನಿಂದ ಈ ಕೃತ್ಯವನ್ನು ಮಾಡಿಸಿದ್ದರು.
ರಾಜಕುಮಾರ ಚೌರಂಗಿಯು ತನ್ನೆಲ್ಲ ವೃತ್ತಾಂತಗಳನ್ನು ವಿಾನನಾಥನಲ್ಲಿ ಹೇಳಿಕೊಂಡು ಅತ್ತನು. ತಂದೆಯಲ್ಲಿ ದ್ರೋಹ ಬುದ್ಧಿಯನ್ನು ಬೆಳೆಸಿ ಈ ರಾಜ್ಯದ ಯಾರೊಬ್ಬರೂ ನನ್ನ ರಕ್ಷಣೆಗೆ ಬರಲಾರನೆಂದನು. ಆ ರಾಜನ ಅವಿವೇಕತನಕ್ಕೆ ವಿಾನನಾಥನು ಮರುಕ ಪಟ್ಟನು. ಚೌರಂಗಿಯನ್ನು ಕಾಪಾಡುವುದಾಗಿ ವಚನವಿತ್ತನು. ಆತನನ್ನು ತನ್ನ ಶಿಷ್ಯನನ್ನಾಗಿ ಸ್ವೀಕರಿಸಿ, ಅವನ ಸೇವೆಗೆಂದು ಗೋರಕ್ಷನಾಥನನ್ನು ನೇಮಿಸಿದನು. ಗುರುವಿನ ಆಜ್ಞೆಯನ್ನು ಪಾಲಿಸುತ್ತಲೂ ಸದಾ ಧ್ಯಾನ ಮಗ್ನರಾಗಿರುವುದರಿಂದಲೂ ಸಿದ್ಧಿಯೂ ಪ್ರಾಪ್ತವಾಗುವುದೆಂದು ಆ ಇಬ್ಬರಿಗೂ ಉಪದೇಶಿಸಿದನು. ತಪಸ್ಸು ಮಾಡುತ್ತಾ ವಾಕ್ ಸಿದ್ಧಿಯನ್ನು ಗಳಿಸಿ, ಕಳೆದುಕೊಂಡ ಕೈಕಾಲುಗಳೂ ಬರುವುದೆಂದು ಚೌರಂಗಿಯನ್ನು ಸಮಾಧಾನ ಪಡಿಸಿದನು. ತನ್ನ ಈ ಅನುಗ್ರಹ ವಿಚಾರವನ್ನು ಗೋರಕ್ಷನಿಗೆ ತಿಳಿಯಗೊಡದೆ, ಆತನನ್ನು ಚೌರಂಗಿಯ ಸೇವಾನಿರತನಾಗಿರುವಂತೆ ಹೇಳಿದನು. ಗೋರಕ್ಷನಾದರೂ ತನ್ನ ಗುರುವಿನ ಆಜ್ಞೆಯನ್ನು ಶಿರಸಾವಹಿಸಿದನು. ಅಲ್ಲೇ ಒಂದು ಕಲ್ಲು ಬಂಡೆಯ ಗುಹೆಯಲ್ಲಿದ್ದುಕೊಂಡು ಚೌರಂಗಿಯನ್ನು ಸೇವಿಸುತ್ತಾ ಇದ್ದನು. ಮೀನನಾಥನ ಆಶೀವರ್ಾದದಿಂದಲೂ ಗೋರಕ್ಷನ ಮಹಿಮೆಯಿಂದಲೂ ದಿನ ದಿನಕ್ಕೂ ಚೌರಂಗಿಯು ಸಿದ್ಧನಾಗುತ್ತಾ ಬಂದನು. ತಪಸ್ಸಿನ ಮಹಿಮೆಯಿಂದ ತಾನರಿಯದಂತೆ ವಾಕ್ ಸಿದ್ಧಿಯನ್ನು ಗಳಿಸಿದನು. ಸಮಸ್ತ ಚರಾಚರಗಳೊಂದಿಗೆ ಬೆರೆತನು. ಆತ್ಮವಿಜ್ಞಾನ ಸಂಪನ್ನನಾದನು.
ಗುಹೆಯೊಳಗೆ ಮಲಗಿಕೊಂಡಿದ್ದ ಚೌರಂಗಿಸಿದ್ಧನು ಒಂದು ದಿನ ವರ್ತಕನೊಬ್ಬನು ಸಂತೆಯಿಂದ ಕಾಳುಮೆಣಸನ್ನು ಮೂಟೆ ಕಟ್ಟಿ ಸಾಗಿಸುತ್ತಿದ್ದುದನ್ನು ಕಂಡನು. ಮೂಟೆ ಏನೆಂದು ಕೇಳಿದಾಗ ಆ ವರ್ತಕನು ಮಾಂಸವೆಂದು ವ್ಯಂಗವಾಗಿ ನುಡಿದನು. ಸತ್ಯವೆಂದು ನಂಬಿದ ಚೌರಂಗಿಸಿದ್ಧನು ಹಾಗೆಯೇ ಆಗಲೆಂದು ಸುಮ್ಮಗಾದನು. ಆ ಮೂಟೆಯನ್ನು ಬಿಚ್ಚಿ ನೋಡಿದಾಗ ಅದೆಲ್ಲ ಮಾಂಸವೇ ಆಗಿತ್ತು. ವರ್ತಕನಿಗೆ ಪರಮಾಶ್ಚರ್ಯವಾಯಿತು. ಮರುದಿನವೂ ಅದೇ ದಾರಿಯಾಗಿ ಮೂಟೆಯನ್ನು ಸಾಗಿಸಿಕೊಂಡು ಹೋಗುತ್ತಿದ್ದ ವರ್ತಕನನ್ನು ಪ್ರಶ್ನಿಸಿದಾಗ ಉಪಾಯವಂತನಾದ ವರ್ತಕನು ನವರತ್ನಗಳೆಂದನು. ಸಿದ್ಧನು ಹಾಗೆಯೇ ಆಗಲಿ ಎಂದು ಬಿಟ್ಟನು. ಮೂಟೆಯನ್ನು ಬಿಚ್ಚಿ ನೋಡಿದಾಗ ಹಾಗೆಯೇ ಆಗಿತ್ತು. ಇದರಿಂದ ಸಂತೋಷಗೊಂಡ ಆ ವರ್ತಕನು ಚೌರಂಗಿಸಿದ್ಧನನ್ನು ನವರತ್ನಗಳಿಂದ ಅಚರ್ಿಸಿ, ಮಹಿಮೆಯನ್ನು ಕೊಂಡಾಡಿದನು. ಚೌರಂಗಿಗೂ ತನ್ನ ಮಹಿಮೆಯು ಏನೆಂದು ತಿಳಿದು, ತಾನು ಗುರುಕೃಪೆಯಿಂದ ವಾಕ್ ಸಿದ್ಧಿಯನ್ನು ಪಡೆದನೆಂದುಕೊಂಡನು. ತನ್ನ ಕೈಕಾಲುಗಳು ಮತ್ತೆ ಬರಲೆಂದು ಹೇಳಿದನು. ಹಾಗೆಯೇ ಆಯಿತು. ಚೌರಂಗಿಯ ಆನಂದಕ್ಕೆ ಪಾರವೇ ಇಲ್ಲವಾಯಿತು. ಮಹಾಸಿದ್ಧಯೋಗಿಯ ಕೃಪೆಯಿಂದ ಇದೆಲ್ಲ ಪ್ರಾಪ್ತವಾಯಿತೆಂದು ಜ್ಞಾನ ಶಕ್ತಿಯಿಂದ ತಿಳಿದುಕೊಂಡನು. ತನ್ನ ಯೋಗ ಸಿದ್ಧಿಯಿಂದ ಆ ಬಾಲನಾಥನಾದ ಗೋರಕ್ಷನಾದ ಗೋರಕ್ಷನಿಗೆ ತಿಳಿಸದೆ ಆ ಗುಹೆಯಿಂದ ರಜತಾದ್ರಿಗೆ ಹೋಗಬೇಕೆಂದನು. ಆಗಲೇ ವಾಕ್ ಸಿದ್ಧಿಯಿಂದ ರಜತಗಿರಿಯೂ ಪ್ರಾಪ್ತವಾಯಿತು.
ಚೌರಂಗಿಸಿದ್ಧನು ಮೀನನಾಥನನ್ನು ಭಕ್ತಿಯಿಂದ ಸ್ತುತಿಸಿದನು. ಭಕ್ತನ ಅವ್ಯಾಜ ಭಕ್ತಿಗೆ ಮೆಚ್ಚಿ ಪರಮೇಶ್ವರನು ಒಲಿದುಕೊಂಡನು. ಆದರೆ ಎಲ್ಲ ವಿಚಾರಗಳನ್ನು ಜ್ಞಾನ ದೃಷ್ಟಿಯಿಂದ ತಿಳಿದುಕೊಂಡ ಆ ಜ್ಞಾನ ಸಿದ್ಧನಾದ ಪರಶಿವನು, ತನ್ನ ಶಿಷ್ಯನಾದ ಗೋರಕ್ಷನ ಮೇಲೆ ಕರುಣೆಗೊಂಡು ಓಡೋಡಿ ಆ ಗುಹೆಯ ಬಳಿಗೆ ಬಂದನು. ಚೌರಂಗಿಯೂ ತನ್ನ ದುಡುಕುತನಕ್ಕೆ ಪಶ್ಚಾತ್ತಾಪ ಪಟ್ಟನು. ಬಾಲನಾಥನು ಇದೆಲ್ಲ ಸಾಧ್ಯವಲ್ಲವೆಂದು ತಿಳಿದುದೆಲ್ಲವೂ ತಪ್ಪು ಎಂದವನಿಗೆ ಮನವರಿಕೆಯಾಯಿತು. ಮುಂದೆ ಆ ಇಬ್ಬರು ಭಕ್ತರನ್ನು ಅನುಗ್ರಹಿಸಿ ಆದಿನಾಥ ಸ್ವರೂಪನಾದ ಮೀನನಾಥನು ತನ್ನ ಲೀಲೆಯನ್ನು ಬೇರೆ ರೂಪದಿಂದ ತೋರಿಸುವುದಕ್ಕಾಗಿ ಕೈಲಾಸಕ್ಕೆ ತೆರಳಿದನು. ಕಾಮ ಸೇವನೆಯನ್ನು ಬಯಸಿ ಮತ್ತೆ ಭೊಲೋಕಕ್ಕೆ ಬಂದನು. ಕನಕಾಂಗನೆಂಬ ರಾಜನ ಪುತ್ರನಾಗಿ ಶೃಂಗಾರ ಶೇಖರನಾಗಿ ವಿಕ್ರಮ ಸಿಂಹನೆಂಬ ತೌಳವ ರಾಜನ ಹನ್ನೆರಡು ಮಂದಿ ಮಂಗಳಂದಿರನ್ನು ಮದುವೆಯಾದನು. ಅಲ್ಲಿ ಸಮಸ್ತ ರಾಜ ವೈಭವದಿಂದ ದೇಶವನ್ನು ಸಂಪದ್ಭರಿತವನ್ನಾಗಿ ಮಾಡಿದನು. ಕದಲೀ ವನದ ಮಂಜುನಾಥನನ್ನು ಸೇವಿಸಿ, ತೌಳವಾದೀಪನಾದ ವಿಕ್ರಮಸಿಂಹನಿಗೆ ಜನಿಸಿದ ಕಲಾವತಿ, ವೀಣಾವತಿ, ವಿಕಾಸಿನಿ, ವಿದ್ಯೋತಿನಿ, ಆನಂದಿನಿ, ಅಮೋದಿನಿ, ಸುಲೋಚನೆ, ಕಮಲಾಕ್ಷಿ, ಪ್ರವೀಣೆ, ಹೇಮಮಾಲಿನಿ, ಕಲಾವತಿ, ಮಧುಮತಿ ಎಂಬ ಹನ್ನೆರಡು ಮಂದಿ ಕನ್ಯೆಯರಾದು. ಅವರನ್ನು ಶೃಂಗಾರ ಶೇಖರನಿಗೆ ವಿವಾಹ ಮಾಡಿಕೊಟ್ಟು ಅವರಲ್ಲಿ ಹನ್ನೆರಡು ಮಂದಿ ಪುತ್ರರತ್ನರಾದರು. ಮೀನನಾಥನು ಮುಂದೆ ತೌಳವಾಧಿಪತಿ  ಎನ್ನಿಸಿಕೊಂಡು ರಾಜ್ಯವನ್ನು ಸಮೃದ್ಧಿಗೊಳಿಸಿದನು. ಕೊನೆಯ ಮಡದಿಯಾದ ಮಧುಮತಿಯಲ್ಲಿ ಸಾಕ್ಷಾತ್ ಮಂಜುನಾಥ ಸ್ವಾಮಿಯೇ ವ್ರತನೇಮಗಳಿಂದ ಸಂತುಷ್ಟನಾಗಿ ಜನ್ಮವೆತ್ತಿದನು. ಅವನೇ ಮುಂದೆ ತನ್ನ ಲೀಲೆಯನ್ನು ತೋರುತ್ತ ಕದಲೀಂದ್ರನಾಥನಾದನು. ತನ್ನ ಹನ್ನೆರಡು ಮಂದಿ ಮಕ್ಕಳಿಗೂ ಕಣರ್ಾಟಕ, ಕಲಿಂಗ, ಗುರ್ಜರ, ಕಾಶ್ಮೀರ, ಅಂಗ, ಕಾಂಬೋಜ, ಯವನ, ದ್ರಾವಿಡ ಮೊದಲಾದ ರಾಜ್ಯಗಳಲ್ಲಿ ಪಟ್ಟಗಟ್ಟಿ ಕೊನೆಯವನಾದ ಮಂಜುನಾಥನಿಗೆ (ಮಧುಮತಿಯ ಪುತ್ರ) ತೌಳವಾಧಿಪತ್ಯವನ್ನು ವಹಿಸಿದನು. ರಾಜ್ಯದ ವ್ಯವಸ್ಥೆಗಳನ್ನೆಲ್ಲ ನಿರೂಪಿಸಿ ಪರಂಜ್ಯೋತಿ ಸ್ವರೂಪನಾದ ಮೀನನಾಥನು ವಿಮಾನವನ್ನೇರಿ ತೆರಳಿದನು. ಭಕ್ತರು ಜಯ ಜಯ ಎನ್ನುತ್ತಿದ್ದರು.
ಕದಲೀಂದ್ರನಾಥನ ಲೀಲೆಯ ಕಾಲದಲ್ಲಿ ಲಂಕೆಯ ರಾವಣೇಶ್ವರನ ತಮ್ಮ ವಿಭೀಷಣನು ತನ್ನ ಸಹೋದರನನ್ನು ವಂಚಿಸಿದ ಭ್ರಾತೃ ದ್ರೋಹ ಪಾಪದ ಪರಿಹಾರಕ್ಕೆಂದು ಈ ಕ್ಷೇತ್ರಕ್ಕೆ ಬಂದಿದ್ದನು. ಪರಶಿವನು ಕೈಲಾಸದಲ್ಲಿ ಶಾಶ್ವತನಾಗಿರುವಂತೆ, ಕಾಶಿ, ಬದರಿ, ಕಾಂಚ, ಕಾವೇರಿ, ತಿರುವನಂತಪುರ, ಪದ್ಮನಾಭ, ಹೈಗನಾಡಿನ ಗೋಕರ್ಣ ಶ್ರೀ ಶೈಲ, ಮಂದರ ರೂಪದಲ್ಲಿಯೂ ಶ್ರೀ ಕದಲೀ ಕ್ಷೇತ್ರದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ರೂಪದಲ್ಲಿಯೂ ಪ್ರಕಟವಾಗಿರುವನು. ಕರಹಾಟಪುರದಲ್ಲಿ, ವಿರೂಪಾಕ್ಷನಾಗಿ ಜನ್ಮವೆತ್ತಿ ಕೊಂಕಣನಾಥನಾಗಿ ತನ್ನ ಲೀಲೆಯನ್ನು ಮೆರೆದನು. ಅನಂಗನಾಥನು ವ್ಯಕ್ತಾವ್ಯಕ್ತ ಸ್ವರೂಪನಾಗಿ ಕಲಾವತಿಯಿಂದೊಡಗೂಡಿ ಪ್ರಪಂಚದ ಮಾಯೆಯನ್ನು ತೊಲಗಿಸಲು ಪ್ರಯತ್ನಿಸಿ ಮತ್ತೆ ಮಂಜುನಾಥನಲ್ಲೇ ಲೀನನಾದನು. ಜಲಂಧರನು ತನ್ನ ಲೀಲೆಯಿಂದ ಮೃತ್ಯುವನ್ನೇ ಜಯಿಸಿದನು. ಮುಂದೆ ಭುಜಗನಾಥನಾಗಿಯೂ ಅರುಣಾಚಲನಾಥನಾಗಿಯೂ ಮಂಜುನಾಥ ಸ್ವಾಮಿ ತನ್ನ ಲೀಲೆಯನ್ನು ಮೆರೆದನು. ಆ ಕಾಲದಲ್ಲಾಗಲೇ ಜನರಲ್ಲಿ ಜಾತಿ ಮತಗಳ ವೈಷಮ್ಯ, ಕಾಪಾಲಿಕ ವಿದ್ಯೆಗಳೇ ಮೊದಲಾದವು ಹುಟ್ಟಿಕೊಂಡಿದ್ದು. ಎಲ್ಲ ಸಾಮಾಜಿಕ ಗೊಂದಲಗಳನ್ನೂ ತಡೆದು ಶೈವ ತತ್ವವನ್ನು ಇತರ ತತ್ವಗಳೊಂದಿಗೆ ಐಕ್ಯಗೊಳಿಸಿ, ಶಾಶ್ವತವಾದ ಮಂಗಲ ಕಾರ್ಯವನ್ನೂ ಲೋಕ ಕಲ್ಯಾಣ ಸೇವೆಯನ್ನೂ ಮಾಡುತ್ತಿದ್ದ ಲೀಲೆಯೇ ಕದಲೀ ಮಂಜುನಾಥ ಸ್ವಾಮಿಯ ಲೀಲೆಯಾಗಿದೆ.
ಸಮಾರೋಪ 4
ಕದಲಿ ಮಂಜುನಾಥ ಕ್ಷೇತ್ರವು ಪವಿತ್ರಾತ್ಮರ ಲೀಲೆಗೆ ಪುಣ್ಯಕ್ಷೇತ್ರವಾಗಿದೆ. ತಪೋವನಗಳಿಂದ ಕಂಗೊಳಿಸುತ್ತಿದ್ದ ಈ ಪುಣ್ಯ ಭೂಮಿಯಲ್ಲಿ ಭರದ್ವಾಜ ಮುನಿಗಳು ಆಶ್ರಮವನ್ನು ಕಟ್ಟಿಕೊಂಡು, ಗುರುಕುಲವಾಸಿಗಳಾದ ಶಿಷ್ಯರಿಗೆ ಜ್ಞಾನದಾನವನ್ನು ಮಾಡುತ್ತಿದ್ದರೆಂಬುದನ್ನು ಪುರಾಣವು ಸಾರುತ್ತದೆ. ಶ್ರೀ ಕ್ಷೇತ್ರದ ಮಹಿಮೆಯಿಂದ ಇಲ್ಲಿ ಎಲ್ಲ ಪಂಥಗಳಿಗೂ ಸ್ಥಾನಮಾನಗಳಿದ್ದುವೆಂದೂ ಭಗವಂತನನ್ನು ಯಾವ ವಿಧದಿಂದ ಭಜಿಸುವರೊ ಅಂತಹ ಭಜಕರ ಭಾವಕ್ಕೆ ತಕ್ಕಂತೆ ಪರಮಾತ್ಮನು ಗೋಚರಿಸುವೆನೆಂಬುದನ್ನು ಕದಲೀ ಮಂಜುನಾಥ ಕ್ಷೇತ್ರ ಮಹಾತ್ಮೈಯು ಸಾರುತ್ತದೆ. ಇಂತಹ ಪಾವನ ಚರಿತ್ರೆಯನ್ನು ಹೇಳುವುದರಿಂದಲೂ, ಕೇಳುವುದರಿಂದಲೂ ಮಾನವನ ಹೃದಯದ ಕಲ್ಮಶಗಳು ನಾಶವಾಗುತ್ತವೆ. ಅವರನ್ನು ಶ್ರೀ ಮಂಜುನಾಥ ಸ್ವಾಮಿಯೂ ಅನುಗ್ರಹಿಸುವನು
ಶ್ರೀ ಕ್ಷೇತ್ರದಲ್ಲಿ ನಡೆಯುವ ಉತ್ಸವಗಳು
ಶ್ರೀ ಕ್ಷೇತ್ರ ಕದಲೀ ಮಂಜುನಾಥ ದೇವರ ಸನ್ನಿಧಿಯಲ್ಲಿ ಕಲಾವಧಿ ನಡೆದು ಬರತಕ್ಕ ಉತ್ಸವಗಳೂ, ಪರ್ವಕಾಲದಲ್ಲಿ ನಡೆಯತಕ್ಕ ಧಾರ್ಮಿಕ ಕಾರ್ಯಗಳೂ ಸಾಂಸ್ಕೃತಿಕ ದೃಷ್ಠಿಯಲ್ಲಿ ಆಸ್ತಿಕರ ಗಮನವನ್ನು ಸೆಳೆಯುವಂತವುಗಳಾಗಿವೆ. ಅವುಗಳಲ್ಲಿ ಭಾದ್ರಪದ ಶುದ್ಧ ತದಿಗೆಯ ದಿನ ನಡೆಯುವ ಕದಿರು ತಂಬುವ ಹೊಸತು ಹಬ್ಬ. ಭಾದ್ರಪದ ಶುದ್ಧ ಚತುರ್ಥಿಯ ದಿನ (ಗಣಪತಿ ದೇವರ ಗುಡಿಯಲ್ಲಿ) ಗಣೇಶ ಚತುರ್ಥಿ, ಅಶ್ವೀಜ ಶುದ್ಧ ಪಾಡ್ಯಮಿಯಂದು ಆರಂಭವಾಗಿ ದಶಮಿಯವರೆಗೆ ನಡೆಯುವ ನವರಾತ್ರಿ (ಅಮ್ಮನವರ ಗುಡಿಯಲ್ಲಿ) ಉತ್ಸವ, ಕಾತರ್ಿಕ ಮಾಸದಲ್ಲಿ ವಿಶೇಷ ಶತರುದ್ರಾಭಿಷೇಕ, ರುದ್ರ ಹೋಮ, ಇವು ಮುಖ್ಯ ಪರ್ವದಿನಗಳ ಉತ್ಸವಗಳಾಗಿದ್ದು, ದೀಪಾವಳಿ ಅಮಾವಾಸ್ಯೆಯಂದು ತೊಡಗಿ ಪತ್ತನಾಜೆ ತನಕ ಮಹಾಪೂಜೆ, ತ್ರಿಕಾಲದಲ್ಲಿ ನಿತ್ಯ ಬಲಿ ಉತ್ಸವಗಳು ನಡೆಯುತ್ತವೆ.
ಕಾರ್ತಿಕ ಅಮವಾಸ್ಯೆಯಂದು ಲಕ್ಷದೀಪೋತ್ಸವ, ಧನುರ್ಮಾಸದಲ್ಲಿ ಧನುರ್ಮಾಸ ಪೂಜೆ, ವ್ಯಾಸ ಪೂಜೆ, ಮಕರ ಮಾಸದಲ್ಲಿ ಮಲರಾಯ ದೈವದ ನೇಮವೂ ಮಕರ ಸಂಕ್ರಮಣದಂದು ಧ್ವಜಾರೋಹಣವಾಗಿ ಒಂಭತ್ತು ದಿನಗಳ ವರ್ಷಾವದಿ ಉತ್ಸವವೂ ಜರಗುವುವು. ಮುಂಚಿನ ದಿನ ಧ್ವಜಾರೋಹಣವಾಗಿ ಮಕರ ಸಂಕ್ರಮಣ ಕಾಲದಲ್ಲಿ ಗಂಗಾ ಭಾಗೀರಥಿ ತೀರ್ಥ ಸ್ನಾನವೂ ಉತ್ಸವದ ಮೊದಲು ಧ್ವಜಾರೋಹಣವಾಗಿ ಬಲಿ ಉತ್ಸವಗಳಾಗಿ ಮರುದಿನದಿಂದ ಪ್ರತಿದಿನ ದೀಪೋತ್ಸವ ಬಲಿ, ಸವಾರಿ ಬಲಿ, ಮೂರನೆಯ ದಿನದಿಂದ ಪುರ್ವಾಭಿಮುಖವಾಗಿ ಬಿಕರ್ನಕಟ್ಟೆಗೆ, ನಾಲ್ಕೆನಯ ದಿನ ದಕ್ಷಿಣಾಭಿಮುಖವಾಗಿ ಮಲ್ಲಿಕಟ್ಟೆಗೆ ಐದನೆಯ ದಿನ ಪಶ್ಚಿಮಾಭಿಮುಖವಾಗಿ ಮುಂಡಾನಕಟ್ಟೆಗೆ, ಆರನೆಯ ದಿನ ಉತ್ತರಾಭಿಮುಖವಾಗಿ ಕೊಂಚಾಡಿ ಕಟ್ಟೆಗೂ ಸವಾರಿ ಬಲಿಗಳಾಗುವುವು. ಏಳನೆಯ ದಿನ ಏಳನೇ ದೀಪೋತ್ಸವ ಇಡೀ ರಾತ್ರಿ ವಿಜೃಂಭಣೆಯಿಂದ ನೆಡೆಯುವುದು. ಎಂಟನೇ ದಿನ ರಥೋತ್ಸವ ಹಾಗೂ ಒಂಭತ್ತನೇ ದಿನ ಅವಭೃತೋತ್ಸವವು ನಡೆಯುವುದು. ಮಾಘ ಕೃಷ್ಣಪಕ್ಷ ಚತುರ್ದಶಿಯಂದು ಮಹಾಶಿವರಾತ್ರಿ, ವಿಷು ಸಂಕ್ರಾಂತಿ – ಯುಗಾದಿ, ವಸಂತ ಮಾಸದ ವಸಂತೋತ್ಸವ ಈ ರೀತಿಯಾಗಿ ಪರ್ವಕಾಲದ ಉತ್ಸವಗಳೂ, ಭಕ್ತ ಜನರು ನಡೆಸುವ ಸೇವಾರ್ಥ ಉತ್ಸವಾದಿಗಳೂ ಶ್ರೀ ಕದಲೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ಹಾಗೂ ಉಪ ದೇವಸ್ಥಾನಗಳಲ್ಲಿಯೂ ನಡೆಯುತ್ತವೆ.
ಶ್ರೀ ಕ್ಷೇತ್ರದ ವಿಶೇಷತೆಗಳು

  • ರಸಕೂಪದಲ್ಲಿರುವ ದೇವರ ಉದ್ಭವಲಿಂಗವು ಅವತಾರ ಸ್ವರೂಪಿಯಾದ ಭಾರ್ಗವ ರಾಮರಿಂದ ಪ್ರಥಮ ಪೂಜೆಯನ್ನು ಕೈಗೊಂಡಿತ್ತು ಎಂದು ಪ್ರತೀತಿ.
  • ಈ ಕ್ಷೇತ್ರದಲ್ಲಿ ದೇವತಾ ಮಂದಿರವು ಕೆಳಭಾಗದಲ್ಲಿದ್ದು ಒಂಭತ್ತು ಕೆರೆಗಳು ಮೇಲಿರುವುದು, ರುದ್ರನು ಶಿರೋ ಭಾಗದಲ್ಲಿ ಗಂಗೆಯನ್ನು ಧರಿಸಿದ್ದಾನೆ ಎಂಬುದಕ್ಕೆ ನಿದರ್ಶನದಂತಿದೆ.
  • ಕೆರೆಯ ಬಳಿಯಲ್ಲಿ ಶ್ರೀ ಗೋಮುಖ ಗಣಪತಿ ದೇವಸ್ಥಾನವಿದ್ದು ಗೋಮುಖದಿಂದ ನಿತ್ಯವೂ ಹರಿಯುವ ಕಾಶೀ ಭಾಗೀರಥಿ ತೀರ್ಥದ ಮೂಲವನ್ನು ಕಂಡು ಹುಡುಕಿದವರಿಲ್ಲ. ಉತ್ತರ ಭಾರತದ ಪವಿತ್ರ ಕಾಶೀ ಕ್ಷೇತ್ರದಿಂದಲೇ ಈ  ತೀರ್ಥವು ಹರಿದು ಬರುತ್ತಿದೆ ಎಂದು ಭಕ್ತರ ನಂಬಿಕೆ.
  • ಪ್ರಧಾನ ದೇವಳದ ಹಿಂಭಾಗದಲ್ಲಿ ಶ್ರೀ ದುಗಾ ದೇವಿಯ ಗುಡಿ, ಅದರ ಸನಿಹದಲ್ಲಿ ಶ್ರೀ ಮಹಾಗಣಪತಿ ಗುಡಿ ಮತ್ತು ದಕ್ಷಿಣ ಭಾಗದಲ್ಲಿ ಶ್ರಿ ಶಾಸ್ತಾವು (ಅಯ್ಯಪ್ಪ ಗುಡಿ)  ಹೀಗೆ ಪರಿವಾರ ದೇವರಿಗೆ ಹೊರಾಂಗಣದಲ್ಲಿ ಪ್ರತ್ಯೇಕ ಗರ್ಭಗುಡಿಗಳು ಇರುವುದು ಇಲ್ಲಿಯ ವಿಶೇಷವಾಗಿದೆ.
  • ಬಾರಹ ಪಂಥಕ್ಕೆ ಸೇರಿದ ನಾಥ ಪಂಥದ ಋಷಿ ಮುನಿಗಳು ತಪಸ್ಸು ಮಾಡಿ ಈ ಪರಿಸರದಲ್ಲಿ ತಮ್ಮದೇ ಮಠವನ್ನು (ಯೋಗೀಶ್ವರ ಮಠ) ಸ್ಥಾಪಿಸಿಕೊಂಡು ದೇವಳಕ್ಕೆ ನಿಕಟ ಸಂಪರ್ಕ ಹೊಂದಿದ್ದಾರೆ. ಪ್ರಧಾನ ಗರ್ಭಗುಡಿಯ ಮೂರು ಬದಿಗಳಲ್ಲಿ ನಾಥ ಪಂಥದ ಗೋರಕ್ಷನಾಥ, ಮತ್ಸ್ಯೇಂದ್ರನಾಥ ಮತ್ತು ಚೌರಂಗಿನಾಥರ ಶಿಲಾಪ್ರತಿಮೆಯು ಪ್ರತಿಷ್ಠಾಪಿಸಲ್ಪಟ್ಟಿದೆ.
  • ಪ್ರಧಾನ ಗರ್ಭಗುಡಿಯಲ್ಲಿ ಮೂರು ಪಂಚಲೋಹದ ವಿಗ್ರಹಗಳಿವೆ. ಇದರಲ್ಲಿ 5 ಅದಿ ಎತ್ತರದ ತ್ರಿಲೋಕೇಶ್ವರ ವಿಗ್ರಹವು (ಸ್ಥಾಪನೆ ಕ್ರಿ.ಶ. 968) ಭಾರತದ ಅತೀ ಶ್ರೇಷ್ಠ ಪಂಚಲೋಹದ ಬಿಂಬ ಎಂಬುದಾಗಿ ಪರಿಗಣಿಸಲ್ಪಟ್ಟಿದೆ. 3 ಅಡಿ ಎತ್ತರದ ಮಂಜುಶ್ರೀ (ವಿಷ್ಣು) ಮತ್ತು ವ್ಯಾಸ (ಬುದ್ಧ) ಬಿಂಬವು ಕನರ್ಾಟಕ ಉತ್ತಮ ಪಂಚಲೋಹದ ಬಿಂಬಗಳಾಗಿವೆ.
ಮುದ್ರಿಸಿ ಮುದ್ರಿಸಿ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

Powered By Indic IME